Composer : Shri Hanumesha vittala
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ಪಾಲಿಸು ಬ್ರಹ್ಮಣ್ಯ ಗುರುವರಾ
ಪಾಲಿಸು ಬ್ರಹ್ಮಣ್ಯ ಗುರುವರಾ [ಪ]
ಬಾಲಕನಾದನ ಪೇಳುವ ಮೊರೆಯನು
ಲಾಲಿಸಬೇಕಯ್ಯಾ ಹೇ ಜೀಯಾ [ಅ.ಪ]
ಅಂದು ಮೃತದೇಹ ಇಂದಿರೇಶನ
ದಯದಿಂದುದ್ಧರಿಸಿದ ಮಂದಹಾಸದಿ
ತವ ಕಂದನೆಂದು ಎನ್ನ ಕುಂದುಗಳೆಣಿಸದೆ
ಚೆಂದದಿ ಕಾಪಾಡೊ ದಯಮಾಡೊ [೧]
ಪುರುಷೋತ್ತಮ ತೀರ್ಥ ಕರಸಂಜಾತನೆ
ಪುರುಷಯೋಜನ ಜನ ಹರಿಪಾದ ಭೃಂಗನೆ
ಹರುಷದಿ ಬಾಲಗೆ ಗುರು ಪದವಿಯನಿತ್ತೆ
ಸಿರಿಪಾದರ ಅಗ್ರಜಾ ಗುರುರಾಜಾ [೨]
ಅನುದಿನ ಸ್ಮರಿಪೆನೋ ಅನಘ ನಿನ್ನಯ ಪಾದ
ಘನ ಮಹಿಮೆಗಳೆಲ್ಲ ಮನದಲಿ ನಿಲ್ಲಿಸೋ
ಘನ ಮಹಿಮನೆ ಎನ್ನ ಬಿನ್ನಪ ಲಾಲಿಸೊ
ಹನುಮನಯ್ಯನ ದಾಸಾ ಯತೀಶ [೩]
pAlisu brahmaNya guruvarA
pAlisu brahmaNya guruvarA [pa]
bAlakanAdana pELuva moreyanu
lAlisabEkayyA hE jIyA [a.pa]
aMdu mRutadEha iMdirESana
dayadiMduddharisida maMdahAsadi
tava kaMdaneMdu enna kuMdugaLeNisade
ceMdadi kApADo dayamADo [1]
puruShOttama tIrtha karasaMjAtane
puruShayOjana jana haripAda BRuMgane
haruShadi bAlage guru padaviyanitte
siripAdara agrajA gururAjA [2]
anudina smaripenO anaGa ninnaya pAda
Gana mahimegaLella manadali nillisO
Gana mahimane enna binnapa lAliso
hanumanayyana dAsA yatISa [3]
Leave a Reply