Composer : Shri Narasimha vittala
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ಬ್ರಹ್ಮಣ್ಯತೀರ್ಥರ ಚರಣಾಬ್ಜಯುಗ್ಮವ
ಸಂಭ್ರಮದಲಿ ಸೇವಿಪೆ ||ಪ||
ಅಂಬುಜಬಂಧು ಸನ್ನಿಭಸಾಧುವೆನುತ ಶ್ರೀ
ಕುಂಭಿಣಿ ಮುನಿವರ್ಯರಾ ಆರ್ಯರಾ ||ಅ.ಪ.||
ತಿದ್ದಿದ ಶ್ರೀಪುಂಡ್ರ ಮುದ್ರೆಗಳಿಂದಲಿ ಸಂ-
ಶುದ್ಧಿ ಮಂಗಳಗಾತ್ರರ
ರುದ್ರಗಳಳೊಲಿದು ಸದ್ವಿದ್ಯೆಗಳನಿತ್ತು
ಉದ್ಧಾರ ಮಾಡಲೆಂದೂ ನಾ ಬಂದೂ ||೧||
ಶಿಷ್ಯರುಗಳು ತಂದ ಭಿಕ್ಷಾನ್ನಂಗಳನಂದು
ಆಕ್ಷಣ ಮಂತ್ರದಿಂದ
ತಕ್ಷಣ ಕಲ್ಪಿಸಿದಂತೆ ಗೈದಾ ಧೀರ
ರಕ್ಷಿಸೆಂದೆರಗುವೆ ನಾ ಬೇಡುವೆ ||೨||
ಕಾಂತೆಯೋರ್ವಳು ತನ್ನ ಕಾಂತ ಸ್ವರ್ಗವನೈದೆ
ಚಿಂತಿಸುತತಿ ಶೋಕದಿ
ಕಾಂತೆ ವಂದಿಸಲು ಸೌಮಾಂಗಲ್ಯವರವನಿತ್ತು
ಕಾಂತನ ರಕ್ಷಿಸಿದ ಕೋವಿದರಾದ ||೩||
ಕುಂದದೆ ಸನ್ಮುನಿವೃಂದದೊಡನೆ ಬಹು
ವೃಂದಾವನದಿ ಶೋಭಿಪ
ಇಂದಿರೆಯರಸ ನರಸಿಂಹವಿಠ್ಠಲನ
ಸನ್ನಿಧಿವರ ಪಾತ್ರರಾ ಪೂತಾತ್ಮರಾ ||೪||
brahmaNyatIrthara caraNAbjayugmava
saMbhramadali sEvipe ||pa||
aMbujabaMdhu sannibhasAdhuvenuta SrI
kuMbhiNi munivaryarA AryarA ||a.pa.||
tiddida SrIpuMDra mudregaLiMdali saM-
shuddhi maMgaLagAtrara
rudragaLaLolidu sadvidyegaLanittu
uddhAra mADaleMdU nA baMdU ||1||
shiShyarugaLu taMda bhikShAnnaMgaLanaMdu
AkShaNa maMtradiMda
takShaNa kalpisidaMte gaidA dhIra
rakShiseMderaguve nA bEDuve ||2||
kAMteyOrvaLu tanna kAMta svargavanaide
ciMtisutati SOkadi
kAMte vaMdisalu saumAMgalyavaravanittu
kAMtana rakShisida kOvidarAda ||3||
kuMdade sanmunivRuMdadoDane bahu
vRuMdAvanadi shObhipa
iMdireyarasa narasiMhaviThThalana
sannidhivara pAtrarA pUtAtmarA ||4||
Leave a Reply