Composer : Shri Shyamasundara dasaru
ರಕ್ಷಿಸೆನ್ನನು ಪಕ್ಷೀಂದ್ರನೆ ನೀನು [ಪ]
ರಕ್ಷಿಸೆನ್ನನು | ಪಕ್ಷಿಪ ಕರುಣ ಕ
ಟಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ [ಅ.ಪ]
ತಂದೆಯನುಜ್ಞದಿ | ಸಿಂಧೂರ ಕೂರ್ಮ
ದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ [೧]
ಅಂದು ಪೀಯೂಷವ | ತಂದು ಮಾತೆಯ
ಬಂಧನ ಬಿಡಿಸಿದ ಬಂಧುರ ಮಹಿಮ [೨]
ಗಗನ ಗಮನ ಪನ್ನಗವಗೆ ಪ್ರಾರ್ಥಿಪೆ
ಮಿಗೆ ಕರುಣದಿ ಯನ್ನಘ ದೂರೋಡಿಸಿ [೩]
ಧಾರಣಿಯೊಳವತಾರ ರಹಿತ ಶೃಂ
ಗಾರವಾದ ಬಂಗಾರ ಶರೀರ [೪]
ವಂದಿಪೆ ವಿನುತ ನಂದನ ಶಾಮ
ಸುಂದರವಿಠಲನ | ಶ್ಯಂದನ ಶೂರ [೫]
rakShisennanu pakShIMdrane nInu [pa]
rakShisennanu | pakShipa karuNa ka
TAkShadiMdIkShisu | tIkShaNa biDade [a.pa]
taMdeyanuj~jadi | siMdhUra kUrma
dvaMdva prANigaLa | tiMda mahAtma [1]
aMdu pIyUShava | taMdu mAteya
baMdhana biDisida baMdhura mahima [2]
gagana gamana pannagavage prArthipe
mige karuNadi yannaGa dUrODisi [3]
dhAraNiyoLavatAra rahita SRuM
gAravAda baMgAra SarIra [4]
vaMdipe vinuta naMdana SAma
suMdaraviThalana | SyaMdana SUra [5]
Leave a Reply