Composer : Shri Gurugovinda dasaru
Shri Vishwapriya Tirtharu :
ArAdhanE: AshADa amAvAsE
Parampare: 32nd in soDE maTa
gurugaLu: shri vishvEsha tIrtharU
shishyarU: shri vishvAdIsha tIrtharU (sOdemaTa)
shri raghupravIra tIrtharU (bhImanakaTTe maTa)
BrindAvana: uDupi krishNa maTa
Period: 1774-1865
ವಂದೇ ವಂದಾರು ಮಂದಾರಮಿಂದಿರಾಬ್ಜ ಮಧುವ್ರತಂ |
ಶ್ರೀವಿಶ್ವಪ್ರಿಯ ಯೋಗೀಂದ್ರ ಹೃದಬ್ಜನಿಲಯಂ ಹರಿಂ ||
vaMdE vaMdAru maMdAramiMdirAbja madhuvrataM |
SrIviSvapriya yOgIMdra hRudabjanilayaM hariM ||
ನಮಿಸುವೆನು ನಮಿಸುವೆನು ವಿಶ್ವಪ್ರಿಯಾರ್ಯ |
ಅಮಮ ನಿಮ್ಮಯ ಮಹಿಮೆ ಪಾಮರನಿಗಳವೇ [ಪ]
ಮುನಿಯು ವಿಶ್ವಾಧೀಶ್ವರ ಕರಜಾತ
ಗುಣ ನಿಧಿಯು ವಿಶ್ವೇಶತೀರ್ಥ ಕರಜ |
ಜನಕತಿ ಪ್ರಿಯನೆಂದು ವಿಶ್ವಪ್ರಿಯಾಭಿಧನೆ
ಗುಣಪೂರ್ಣ ಹಯಗ್ರೀವ ಪಾದ ಭಜಕ [೧]
ಸ್ವಪ್ನದ್ರಷ್ಟುಗಳೆನಿಸಿ ಅಪ್ಪ ಹಯ ಮುಖದಯದಿ
ಅಪ್ಪುತಲಿ ಜಾತಿಸ್ಮೃತಿ ಗೊಪ್ಪವೆಂದೆನಿಪ |
ಸ್ವಪ್ನದಾಖ್ಯಾನವನು ಪ್ರಕರಣಗಳೆಂದೆನಿಸಿ
ಕೃಪ್ಪಯಲಿ ವ್ಯಕ್ತಿಗಳ ಪರಿಚಯವ ಗೈದೇ [೨]
ನಿರಶನಾದಿ ವ್ರತವು ಮರಳಿ ಶಿಬಿಕಾರೋಹ
ಪುರಟ ಸಂಪುಟಗತವು ಮಧ್ಯವಾಟಸ್ಥ |
ಹರಿ ಪ್ರತಿಮೆ ಕೃಷ್ಣ ಬಳಿ ಅರ್ಚಿಸುತ ಭಾವೀಂದ್ರ
ಮೆರೆದ ಗುರುಗೋವಿಂದ ವಿಠಲ ಭಕ್ತೇಶ [೩]
namisuvenu namisuvenu viSvapriyArya |
amama nimmaya mahime pAmaranigaLavE [pa]
muniyu viSvAdhISvara karajAta
guNa nidhiyu viSvESatIrtha karaja |
janakati priyaneMdu viSvapriyABidhane
guNapUrNa hayagrIva pAda Bajaka [1]
svapnadraShTugaLenisi appa haya muKadayadi
apputali jAtismRuti goppaveMdenipa |
svapnadAKyAnavanu prakaraNagaLeMdenisi
kRuppayali vyaktigaLa paricayava gaidE [2]
niraSanAdi vratavu maraLi SibikArOha
puraTa saMpuTagatavu madhyavATastha |
hari pratime kRuShNa baLi arcisuta BAvIMdra
mereda gurugOviMda viThala BaktESa [3]
Leave a Reply