Composer : Shri Gopaladasaru
ನಮೋ ನಮೋ ನಾಗಪ್ರಸನ್ನ ಸುರವರೇಣ್ಯ |
ನಮೋ ನಮೊ ಜಯತೀರ್ಥರಾಯ ಶ್ರೀ ಮುನಿರನ್ನ |
ಶ್ರೀಮಧ್ವಮತಾಬ್ಧಿ ಚಂದ್ರ ಶುಭ ಗುಣಸಾಂದ್ರ |
ಶ್ರೀಮಂತ ಶ್ರೀಗುರುವೆ ವಿಭುವೆ || ಪ ||
ಅಜ್ಞಾನ ತಿಮಿರ ಜಗವೆಲ್ಲಾ ವ್ಯಾಪಿಸಿಯಿರಲು |
ರುಗ್ಮಿಣಿ ಅರಸನಾನುಜ್ಞದಲ್ಲಿ ಅವತರಿಸಿ |
ಅಜ್ಞಾನತೊಡೆದು ಐಕ್ಯಜ್ಞಾನಗಳ ತಡದು |
ಸುಜ್ಞಾನವೆಂಬಾ ಸುಧಾಮೃತಕರದ ಗುರುವೆ || ೧ ||
ಸಕಲಗ್ರಂಥಕೆ ಟೀಕ ವಿಕಸಿತಾವಾಗಿನ್ನು
ಸುಖತೀರ್ಥರಾಯರ ಸೂ ಉಕುತಿಯ ವಿಸ್ತರಿಸಿ |
ಅಖಿಳ ಜನರಿಗೆಲ್ಲ ಉಪಕಾರವಾಗಿ ಶ್ರೀ |
ಲಕುಮಿಕಾಂತನ ವಲಿಸಿದೆ ಗುರುವೆ || ೨ ||
ಅಲ್ಪಮತಿಗಳಿಗೆ ಅಜ್ಞಾನಿಯಂತೆ ತೋರಿ |
ಸ್ವಲ್ಪದಿನ ಸಂಸಾರವಸ್ಥಿತಲಿ ಇದ್ದು ಅಹಿತ |
ಲ್ಪನ್ನ ಕರುಣವನ್ನು ಪಡೆದು ತುರಿಯಾಶ್ರಮದಿ |
ಬಲ್ಪಂಥದಲ್ಲಿ ಮೆರೆದಾ ಗುರುವೆ || ೩ |
ನಿಮ್ಮದರುಶನ ಸ್ಪರಿಶ ಸಲ್ಲಾಪವೆಂಬುವವು |
ಸುಮ್ಮಾನಸರಿಗೆ ಅಲ್ಪದನ್ಯಾನಜರಿಗೆವುಂಟೆ |
ಯಮ್ಮಾ ಗುರುಗಳೆ ನಿಮ್ಮಾ ಮಹಿಮೆಯನು ಬಲ್ಲಿರಾ
ಧರ್ಮ ನಾ ನಿಮ್ಮಾರಿವಿನ ಗುರುವೆ || ೪ ||
ತಪಸು ಯೇಸು ಜನ್ಮ ಸಫಲಿಸಿತೊ ಯನಗಿನ್ನು
ಸ್ವಪನದಲಿ ನಿಮ್ಮದರಿಶನ ಲಾಭಾ ಅಪಮಾರ್ಗಗಳ ಬಿಡಿಸಿ |
ಸುಪಮಾರ್ಗ ತೋರಿ ಯೆನ್ನ ಉಪ |
ದೇಶದಿಂದ ಬಲು ರಿಪು ಭಯವ ಕಡಿದೆ || ೫ ||
ಸರ್ವಲಕ್ಷಣ ರೂಪ ಸರ್ವಜ್ಞ ಮತ ಸ್ಥಾಪ |
ಶರ್ವಾದಿ ಮತ ಕೂಪ ಸವರಿ ಹೂಳಿದ ಭೂಪಾ |
ದೂರ್ವಾದದ್ರಿಗೆ ಕುಲಿಶ ಗರ್ವದೋಷವಿನಾಶ
ನಿರ್ವ್ಯಾಜ ನಿಯಾಮಕ ಗುರುವೆ || ೬ ||
ಕಾಲಕಾಲಕ್ಕೆ ನಿಮ್ಮಾ ಶೀಲರೂಪವ ಮನಕ್ಕೆ |
ಮೇಲಾಗಿ ತೋರಿ ಪರತತ್ವಗಳ ತಿಳಿಸಿನ್ನು |
ಪಾಲಸಾಗರಶಾಯಿ ಗೋಪಾಲವಿಠ್ಠಲನ್ನ |
ಊಳಿಗೋಲಗದಿಟ್ಟು ಪಾಲಿಸದು ಗುರುವೆ ||೭ ||
namO namO nAgaprasanna suravarENya |
namO namo jayatIrtharAya SrI muniranna |
SrImadhvamatAbdhi caMdra SuBa guNasAMdra |
SrImaMta SrIguruve viBuve || pa ||
aj~jAna timira jagavellA vyApisiyiralu |
rugmiNi arasanAnuj~jadalli avatarisi |
aj~jAnatoDedu aikyaj~jAnagaLa taDadu |
suj~jAnaveMbA sudhAmRutakarada guruve || 1 ||
sakalagraMthake TIka vikasitAvAginnu
suKatIrtharAyara sU ukutiya vistarisi |
aKiLa janarigella upakAravAgi SrI |
lakumikAMtana valiside guruve || 2 ||
alpamatigaLige aj~jAniyaMte tOri |
svalpadina saMsAravasthitali iddu ahita |
lpanna karuNavannu paDedu turiyASramadi |
balpaMthadalli meredA guruve || 3 |
nimmadaruSana spariSa sallApaveMbuvavu |
summAnasarige alpadanyAnajarigevuMTe |
yammA gurugaLe nimmA mahimeyanu ballirA
dharma nA nimmArivina guruve || 4 ||
tapasu yEsu janma saPalisito yanaginnu
svapanadali nimmadariSana lABA apamArgagaLa biDisi |
supamArga tOri yenna upa |
dESadiMda balu ripu Bayava kaDide || 5 ||
sarvalakShaNa rUpa sarvaj~ja mata sthApa |
SarvAdi mata kUpa savari hULida BUpA |
dUrvAdadrige kuliSa garvadOShavinASa
nirvyAja niyAmaka guruve || 6 ||
kAlakAlakke nimmA SIlarUpava manakke |
mElAgi tOri paratatvagaLa tiLisinnu |
pAlasAgaraSAyi gOpAlaviThThalanna |
ULigOlagadiTTu pAlisadu guruve ||7 ||
Leave a Reply