Composer : Shri Pranesha dasaru
Shri Varadendra Tirtharu : 1761-1785
vaadE vijayasheelaaya varadaaya varaarthinaaM|
vadaanyajanasiMhaaya varadEMdraaya tE nama:|
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|
Ashrama Gurugalu – Vasudendra Theertharu
Ashrama Shishyaru – Sri Bhuvanendra Theertharu
Vrundavana – Poona
Aradhana – Ashada Shukla Shashti
ಹಿಂದಿನ ಸುಕರ್ಮವೇಸು | ಬಂದೊದಗಿದವೊ | ವರ |
ದೇಂದ್ರರಾಯ ಬಂದ ನಮ್ಮ |ಮಂದಿರಕಿಂದು | ಪ |
ಮುತ್ತಿನ ಅಂದಣದೊಳು |ಸತ್ತಿಗಿ ನೆರಳಲಿ | ಪ್ರ |
ಶಸ್ತವಾಗಿ ವೇದಶಾಸ್ತ್ರ | ವೊತ್ತಿವೋದುವ |
ಉತ್ತಮ ಬುಧರ ಕೂಡ | ಭೃತ್ಯರ ಸಂಗಡ ಬಹು |
ಹತ್ತೆಂಟು ಬಿರುದಾವಳಿ – ಯುಕ್ತ ಬಂದರು |೧ |
ತಂಡತಂಡಕ್ಕೆ ಜನರು |ಹಿಂಡುಗೂಡಿ ಫಲಗಳ |
ಕೊಂಡು ಬಂದು ಮಾಡುವರು |ದಂಡ ಪ್ರಣಾಮ |
ಪಂಡಿತಾಗ್ರಗಣ್ಯರು | ಭೂ |ಮಂಡಲದೊಳಾಗ ಶ್ರೀಯಾ |
ಖಂಡಲನಂತೆ ತೋರ್ವ | ಕಮಂಡಲಧರ | ೨ |
ಶ್ರೀಕರ ಪ್ರಾಣೇಶವಿಠಲ-ನೇಕಾಂತದಿ ಒಲಿಸುವಲ್ಲಿ |
ಈ ಕುಂಭಿಣಿಯೊಳಗೀತಗೆ ಕಾಣೆನೀಡ |
ನೀ ಕಾಯಬೇಕೆಂದವರ |ಶೋಕವ ಪರಿಹರಿಸಿ |
ಜೋಕೆ ಮಾಡುವ ನಿತ್ಯ | ದೇಶಿಕ ಕುಲಪತಿ | ೩ |
hiMdina sukarmavEsu | baMdodagidavo | vara |
dEMdrarAya baMda namma |maMdirakiMdu | pa |
muttina aMdaNadoLu |sattigi neraLali | pra |
SastavAgi vEdaSAstra | vottivOduva |
uttama budhara kUDa | BRutyara saMgaDa bahu |
hatteMTu birudAvaLi – yukta baMdaru |1 |
taMDataMDakke janaru |hiMDugUDi PalagaLa |
koMDu baMdu mADuvaru |daMDa praNAma |
paMDitAgragaNyaru | BU |maMDaladoLAga SrIyA |
KaMDalanaMte tOrva | kamaMDaladhara | 2 |
SrIkara prANESaviThala-nEkAMtadi olisuvalli |
I kuMBiNiyoLagItage kANenIDa |
nI kAyabEkeMdavara |SOkava pariharisi |
jOke mADuva nitya | dESika kulapati | 3 |
Leave a Reply