Amma lakumi devi

Composer : Shri Pradyumna Tirtharu

By Smt.Shubhalakshmi Rao

ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ [ಪ]

ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ (೧)

ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ (೨)

ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ (೩)

ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ (೪)

ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ (೫)


ammA lakumidEvi nimmarasana tOre
summane biDuvadu sammatavE ninage [pa]

hetta bAlaru maMdamatigaLAdare tAyi
sattu hOgali eMdu ettade biDuvoLe (1)

nimma mAtige hari sammatanAguva
kumatigaLeNisade rAma mUruti tOre (2)

siMdhutanaye enna baMdha biDisi bEga
naMda kaMdana pAda poMdiruvaMte mADe (3)

tatvESarellarU nityAdhInaru nimage
BRutyage nija hari Bakti koDuvaMte pELe (4)

ennaliruva hInarODisi bEga
pannagAcalavAsa SrI narahari tOre (5)

Leave a Reply

Your email address will not be published. Required fields are marked *

You might also like

error: Content is protected !!