Composer : Shri Pradyumna Tirtharu
ಮುದ್ದು ಸುರಿಯುತಾನೆ ನೋಡಿ ಕೃಷ್ಣ [ಪ]
ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ
ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ [ಅ.ಪ]
ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ
ಸಾವೇರಿ ಮೊದಲಾದ ರಾಗವ ಪಾಡುತ (೧)
ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು
ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ (೨)
ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ
ಮುಕುಟ ಶಿರಶ್ಚಕ್ರ ಶೋಭಿತಮುಖ (೩)
ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ
ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ (೪)
ಶ್ರೀ ನರಹರಿಯು ತಾ ನೆನೆಯುವರಿಗೆ
ಭವ ಕಾನನದ ಭಯದ ಮನ ಶಂಕಿಸದಿರೆಂದು (೫)
muddu suriyutAne nODi kRuShNa [pa]
muddu suriyutAne siddha janara vaMdya
madhvavallaBa kRuShNa hRudvanajadali bal [a.pa]
trivaMgi BAvadi SrI vENupiDidu tA
sAvEri modalAda rAgava pADuta (1)
balada pAdadi celuva eDada pAdavaniTTu
naLinamuKi rukmiNi bala satyaBAmEriMda (2)
dhvaja vajrAMkuSa cakra kaMjacinhegaLiMda tEja
mukuTa SiraScakra SOBitamuKa (3)
SrI pAdarAyarige svapnalabdhanAgi
SrI padmaBavaMdya pratyakSha vyAsamunige (4)
SrI narahariyu tA neneyuvarige
Bava kAnanada Bayada mana SaMkisadireMdu (5)
Leave a Reply