Enidu Roopa Shri Narahare

Composer : Shri Pradyumna Tirtharu

By Smt.Shubhalakshmi Rao

ಏನಿದು ರೂಪ ಶ್ರೀ ನರಹರೆ [ಪ]

ಏನಿದು ರೂಪವೋ ಮನಸಿಜನಯ್ಯನೇ
ನೆನಿಸಿದವರ ಹೃದ್ವನಜದೊಳ್ ಮೆರೆವುದೂ [ಅ.ಪ]

ಮಾರನ ಪಿತನೆಂದು ಕರೆಸಿ ಕೊಂಬುವನಿಗೆ
ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು (೧)

ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು
ಕ್ರೂರ ರೂಪದಿಂದ ನರರಿಗೆ ತೋರ್ಪುದು (೨)

ವರ ವೈಜಯಂತಿಯ ಕೊರಳೊಳ್ ಧರಿಸುವಗೆ
ಕರುಳ ಹಾರವ ಧರಿಸಿ ವರ ಶಬ್ದ ಮಾಳ್ಪುದು (೩)

ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ
ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು (೪)

ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು
ನರಹರಿ ಎನಿಸಿ ನೀ ಭರದಿ ಬಂದಿರುವುದು (೫)


Enidu rUpa SrI narahare [pa]

Enidu rUpavO manasijanayyanE
nenisidavara hRudvanajadoL merevudU [a.pa]

mArana pitaneMdu karesi koMbuvanige
mOreyoL mUru kaNNugaLa dharisiruvudu (1)

parama SAMtaneMdu mereyuvI SrutiyoLu
krUra rUpadiMda nararige tOrpudu (2)

vara vaijayaMtiya koraLoL dharisuvage
karuLa hArava dharisi vara Sabda mALpudu (3)

nAnE dEvaru mattu anyarilleMbuva
kanaka kaSyapa muKya danujara sILvudu (4)

taraLa karadAkShaNadi vara vaikuMThava biTTu
narahari enisi nI Baradi baMdiruvudu (5)

Leave a Reply

Your email address will not be published. Required fields are marked *

You might also like

error: Content is protected !!