Eshtendu bannipe guru

Composer : Shri Prasannavenkata dasaru on Shri Satyapoorna Tirtharu

By Smt.Shubhalakshmi Rao

Shri Satyapoorna Tirtharu 1648-1726,
Aradhane – Jyeshta Krishna Dvitiya,
Vrundavana- Kolpur
|| satyAbhinavadugdAbdheH sa~njAtaH sakaleShTadaH
shrIsatyapUrNatIrthenduH santApAn hantu santatam ||
सत्याभिनवदुग्दाब्धेः सञ्जातः सकलेष्टदः।
श्रीसत्यपूर्णतीर्थेन्दुः सन्तापान् हन्तु सन्ततम्॥


ಎಷ್ಟೆಂದು ಬಣ್ಣಿಪೆ ಗುರು ಸತ್ಯಪೂರ್ಣನ
ದೃಷ್ಟಾಂತವ ಕಾಣೆನಾ
ಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂ
ತಿಷ್ಟಾರ್ಥದಾಯಕನಾ |ಪ|

ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದ
ಲ್ಲಾರಾಧನೆ ಮಾಡುತ
ಧಾರುಣಿ ಮೇಲವತರಿಸಿದ ದ್ವಿಜಕುಲ
ವಾರಿಧಿ ಚಂದ್ರನಂತೆ (೧)
ವೇದ ವೇದಾಂತ ಸಕಳಶಾಸ್ತ್ರ ಕ್ಷಿಪ್ರ
ದಿಂದೋದಿ ಶ್ರೀ ಮಧ್ವಶಾಸ್ತ್ರ
ಬೋಧವ ಕೇಳಿ ಮಹಾಭಕುತಿಲಿ ಗುರು
ಪಾದಾಬ್ಜ ನಂಬಿ ನಿಂತ (೨)
ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನ
ನಿರ್ಮಲ ಕಳೆಯನಾಂತ
ಉಮ್ಮಯದಿಂದ ಷಟ್ಕರ್ಮ ಸಾಧನವಾದ
ಧರ್ಮದ ದಾರಿಲಿ ನಿಂತ (೩)
ತಾಯಿ ಮಕ್ಕಳ ಸಾಕಿದಂತೆ ಗುರು ಕೃಪಾ
ಪೀಯೂಷವನುಂಡು ತಾ
ಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿ
ಷ್ಕಾಮನ ತೇಜವಂತ (೪)
ನಿತ್ಯದ ಕರ್ಮಕೆ ಕುಂದಾಗಲಿಲ್ಲಗ್ನಿ
ಹೋತ್ರ ಸಹಿತ ಸುವಾನ
ಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿ
ರಕ್ತಿ ಭಾಗ್ಯಾನ್ವಿತನ (೫)
ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗ
ದ್ಹುಣ್ಣಿಮೆ ಚಂದ್ರಮನೊ
ಉನ್ನತಗುರು ಸತ್ಯಾಭಿನವ ತೀರ್ಥರ
ಪುಣ್ಯವೆ ನೀನೊ ಯತಿರನ್ನನೊ (೬)
ಹೀಗೆಂದು ಸುಜನರು ಹೊಗಳಲು ಶ್ರೀಪಾದ
ಯೋಗಿ ತಾನೆನಿಸಿದನು
ಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವ
ಲ್ಲಿಗೆ ಹಬ್ಬುಗೆನಿತ್ತನು (೭)
ಗುರುಗಳಭೀಷ್ಟೆ ಪೂರೈಸಿತು ಶ್ರೀರಘು
ವರನ ಮೂರ್ಧನಿಯಲಿಟ್ಟು
ಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗ
ದ್ಗುರುವೆ ತಾನಾದ ಕರ್ತ (೮)
ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದ
ಹವ್ಯಸಾಂಕಿತ ಗುರುಗಳು
ಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿ
ದಿವಸ ದಿವಿಗೆ ಸಾಗಲು (೯)
ಹರಿಪಾದಯಾತ್ರೆಗೆ ಗುರುಗಳೈದಿದ ಮೇಲೆ
ಪರಮ ದುಃಖಿತ ಮೌಳಿ
ತ್ವರಿಯದಿ ವೃಂದಾವನ ವಿರಚಿಸಿದ ಮುನಿ
ವರನ ಮಹಿಮೆಯ ಕೇಳಿ (೧೦)
ಪೃಥ್ವಿಪರಿಂದ ಪೂಜಿಸಿಕೊಂಡು ದುರ್ವಾದಿ
ಮೊತ್ತವ ಗೆಲುತಲಿಹ
ಅರ್ಥಿಲಿ ಜಯಪತ್ರವನು ಜಯಿಸುತ ಗುರು
ಚಿತ್ತಕರ್ಪಿಸುತಲಿಹ (೧೧)
ನಿಜ ಗುರು ದಯದಿಂದ ದುರಿತತಮವ ಗೆದ್ದಂ
ಬುಜ ಸಖನಂತೊಪ್ಪುವ
ತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯ
ಭಜನ ಭಾಗ್ಯದೊಳೊಪ್ಪುವ (೧೨)
ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನು
ಜ್ಞಾನ ಭಕುತಿಪೂರ್ಣನು
ಏನೆಂಬುವಿರೊ ಕರುಣಗುಣ ಪೂರ್ಣನು
ದಾನ ಮುದ್ರಾಪೂರ್ಣನು (೧೩)
ಗುರು ಸತ್ಯಾಭಿನವ ತೀರ್ಥರ ಸತ್ಯಪೂರ್ಣನು *
ವರದರಾಜ ಯತಿಯೊಳು ದಯಾಪೂರ್ಣನು
ಸರಸೋಕ್ತಿ ಪರಿಪೂರ್ಣನು (೧೪)
ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥ
ವೃಂದರುಚಿರ ಪೂರ್ಣನು
ಎಂದು ಪ್ರಸನ್ವೆಂಕಟ ಪ್ರಿಯಾನಿಲಮತ
ಸಿದ್ಧಾಂತದಿ ಪೂರ್ಣನು (೧೫)


eShTeMdu baNNipe guru satyapUrNana
dRuShTAMtava kANenA
SiShTa janarige ciMtAmaNi dorakidaM
tiShTArthadAyakanA |pa|

SrIrAma vyAsara sEvege pUrvada
llArAdhane mADuta
dhAruNi mElavatarisida dvijakula
vAridhi caMdranaMte (1)
vEda vEdAMta sakaLaSAstra kShipra
diMdOdi SrI madhvaSAstra
bOdhava kELi mahABakutili guru
pAdAbja naMbi niMta (2)
brahmacaryASrama modalAgi dina dina
nirmala kaLeyanAMta
ummayadiMda ShaTkarma sAdhanavAda
dharmada dArili niMta (3)
tAyi makkaLa sAkidaMte guru kRupA
pIyUShavanuMDu tA
bAyeMdu karesikoMDaKiLArtha paDeda ni
ShkAmana tEjavaMta (4)
nityada karmake kuMdAgalillagni
hOtra sahita suvAna
prasthanAgi BOgAsaktiya toreda vi
rakti BAgyAnvitana (5)
baNNaviTTiha cokka cinnano aBraga
d~huNNime caMdramano
unnataguru satyABinava tIrthara
puNyave nIno yatirannano (6)
hIgeMdu sujanaru hogaLalu SrIpAda
yOgi tAnenisidanu
myAge myAgadButa pAMDityaveMba va
llige habbugenittanu (7)
gurugaLaBIShTe pUraisitu SrIraGu
varana mUrdhaniyaliTTu
sthira paTTABiShEkavAMgIkarisi jaga
dguruve tAnAda karta (8)
divya nAcAra kShEtradi harismaraNiMda
havyasAMkita gurugaLu
A vyayAbda jyEShThAdhika Suddha caturdaSi
divasa divige sAgalu (9)
haripAdayAtrege gurugaLaidida mEle
parama duHKita mauLi
tvariyadi vRuMdAvana viracisida muni
varana mahimeya kELi (10)
pRuthvipariMda pUjisikoMDu durvAdi
mottava gelutaliha
arthili jayapatravanu jayisuta guru
cittakarpisutaliha (11)
nija guru dayadiMda duritatamava geddaM
buja saKanaMtoppuva
trijagavaMditarAda vEda vyAsAMGriya
Bajana BAgyadoLoppuva (12)
dhyAna mauna sadvyAKyAna pUrNanu
j~jAna BakutipUrNanu
EneMbuviro karuNaguNa pUrNanu
dAna mudrApUrNanu (13)
guru satyABinava tIrthara satyapUrNanu *
varadarAja yatiyoLu dayApUrNanu
sarasOkti paripUrNanu (14)
taMde satyABinavAMbudhijAta tatvArtha
vRuMdarucira pUrNanu
eMdu prasanveMkaTa priyAnilamata
siddhAMtadi pUrNanu (15)

Leave a Reply

Your email address will not be published. Required fields are marked *

You might also like

error: Content is protected !!