Composer : Shri Prasannavenkata dasaru
Sri Satyabhinava Tirtharu
Period – 1673 – 1706
ಸತ್ಯನಾಥಾಬ್ಧಿಸಂಭೂತ: ಸದ್ಗೋಗಣವಿಜೃಂಭಿತ: |
ಸತ್ಯಾಭಿನವತೀರ್ಥೇಂದು ಸಂತಾಪಾನ್ ಹಂತು ಸಂತತಂ |
satyanaathaabdhisambhUta: sadgOgaNavijRumbhita: |
satyaabhinavatIrthEndu santaapaan hantu santatam |
Aradhane: Jyeshta Shuddha Chaturdashi
Vrundavana : Nachiargudi or Nachiarkoil (TN)
ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ [ಪ]
ತಾರಾಪತಿಯಂತೆ ಕೀರ್ತಿ ಪ್ರಸರವಿ
ಸ್ತಾರದಿ ಬುಧ ಚಕೋರವೃಂದಕೆ ನೀನು (೧)
ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳ
ನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದು ಕಾಂತಿಗೆ (೨)
ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆ
ಮಾರುತಿ ಮತತತ್ವ ವಾರಿಧಿ ತರಂಗಕೆ (೩)
ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯ
ಗರೆಯುತ ಹೃತ್ತಾಪ ಪರಿಹರಿಸುವಂಥ (೪)
ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತ
ವಸುಧೆಯಾಚಕ ಕುಮುದ ಕುಸುಮ ಕೈರವ (೫)
tArApatiyahudau satyABinava tIrtha guruve [pa]
tArApatiyaMte kIrti prasaravi
stAradi budha cakOravRuMdake nInu (1)
ikShucApana gade kakShipa mAyigaLa
nIkShipe niruta satprEkSheMdu kAMtige (2)
SrIrAma vEdavyAsara sEveyoLihe
mAruti matatatva vAridhi taraMgake (3)
gurupAda smaraNeya mareyade amRuta vAkya
gareyuta hRuttApa pariharisuvaMtha (4)
prasanveMkaTa prIta SrI satyanAthara suta
vasudheyAcaka kumuda kusuma kairava (5)
Leave a Reply