Bhrunga ninnattidane – Bhramara geete

Composer : Shri Shripadarajaru

By Smt.Shubhalakshmi Rao

ಭೃಂಗಾ ನಿನ್ನಟ್ಟಿದನೇ ಶ್ರೀರಂಗ
ಮಧುರೆಲಿ ನಿಂದು,
ಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿ
ಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚು
ಹಿಂಗಿಸುತೈಧಾನೆ ಅಸುವ ಹೇ ಕಿತವಾ [ಪ]

ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯ
ಚನ್ನಿಗರರಸ ಕುಶಲೋನ್ನತಿಯೊಳಿಹನೇನೋ
ಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋ
ಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾ |
ಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆ
ವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದು
ತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿ
ನಡುನೀರೊಳು ತೊರೆದ್ಹೋದನೆ ಹೇ ಕಿತವಾ (೧)

ತಮ್ಮ ನಂದಗೋಪ ಯಶೋದಮ್ಮನ ಕಂಡು ಬಾರೆಂದು
ರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆ
ಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾ
ನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆ |
ಹೊಮ್ಮೇಲಟ್ಟದಲಂಚೆಯಗಮ್ಮನೇರ ಕುಚದ
ಕುಂ-ಕುಮ್ಮ ಕಸ್ತೂರಿಯ ಕರದಿಮ್ಮನದಿ ಸಿಲುಕಿದಂಗೆ
ಕಮ್ಮಗೋಲನ ಬಾಣಂಗಳುಮ್ಮಳಿ ನೋಯಿಸುತಿವೆ
ಸುಮ್ಮನೆ ಬಾಹೋದು ಸುಲಭವೆ ಹೇ ಕಿತವಾ (೨)

ಮಧುಕುಂಜ ವನದಲ್ಲಿ ಮಧುವೈರಿ ಕೊಳಲನೂದಲು
ಮಧುರ ನಿಸ್ವನ ಕೇಳಿ ಮದಿರಾಕ್ಷಿಯರೆಲ್ಲ
ಧಾಮದ ಧ್ಯಾನವ ಬಿಟ್ಟು ಮೃಗಮದಗುಪವಿಡಿ
ದೈದಿ ಮದನನಯ್ಯನ ಕಾಣುತ ಶ್ರೀ ಹರಿಯ |
ಮುದವೇರಿ ತಲೆಬಾಗಿ ಮೇದಿನಿ ನಿಟ್ಟಿಸಲಾಗ
ಮೃದುವಾಕ್ಯದೊಳೆಮ್ಮಪ್ಪಿ ಅಧರಾಮೃತ ಭೋಜನಕ್-
ಕೊದಗುವ ಸತತ ಸನ್ನದ್ಧ ನಮ್ಮನಗಲಿ
ಕಲ್ಲೆದೆಯಾದನೆಂತೋ ಕೃಪಾಳು ಹೇ ಕಿತವಾ (೩)

ವಜ್ರಾಂಕುಶ ಧ್ವಜಾಂಕಿತ ಹೆಜ್ಜೆಯನ್ನೇ ತಿಳಿದ
ನಮ್ಮಬ್ಜಾಕ್ಷಿಯರೊಡನೆ ರತಿ ಕಜ್ಜದುಪವನದಲ್ಲಿ
ನಿರ್ಜನರೋತ್ತಂಸರೊಡನೆ ಮಜ್ಜನ ಕ್ರೀಡೆಯಾಡುವ
ಸಾಯುಜ್ಯ ಸುಖವತ್ತಲಿಪ್ಪವೊ ಶ್ರೀ ಹರಿಯ |
ಅಬ್ಜಭವ ಮುನಿಜನ ಪೂಜ್ಯನಗಲಿದ ಮ್ಯಾಲೆ
ನಿರ್ಜೀವಿಗಳಾಗಿ ಕಣ್ಣ ಕಜ್ಜಲ ಕಲಕಿಕೊಂಡು
ಲಜ್ಜೆಗೆಟ್ಟು ತನುಲತೆ ಜರ್ಝರಿತದಿ ಜೀವಿಸೆ
ವಜ್ಜರೆದೆಯಲ್ಲವೆ ನಮ್ಮದು ಹೇ ಕಿತವಾ (೪)

ಕತ್ತೂರಿಯ ಬಟ್ಟನಿಟ್ಟು ಮುತ್ತಿನ ಜೊಲ್ಲೆದುರುಬಿನಲಿ
ಕಸ್ತೂರಿ ತಿಲಕ ಚಲತ್ ಕುಂಡಲವೆಳಗು
ವೃತ್ತವದನದಿ ಮಂದಸ್ಮಿತ ತಿಂಗಳಿಂದಲೆಮ್ಮ
ಹೃತ್ತಾಪ ಪರಿಹರಿಸುವ ಶ್ರೀಹರಿಯ |
ಮತ್ತೆ ವಕ್ಷದ ಶ್ರೀವತ್ಸ ಕೌಸ್ತುಭ ವೈಜಯಂತಿ ಮಾಲೆ
ಶ್ರೀ ತುಲಸಿ ಘಮ ಘಮಿಸುತ್ತಲಿಹ ವನಮಾಲೆ
ರತುನ ಕಂಕಣ ಭುಜಕೀರ್ತಿಯಿಂದೊಪ್ಪುವ
ಪುರುಷೋತ್ತಮನ್ನ ಬಣ್ಣಿಪರುಂಟೇ ಹೇ ಕಿತವಾ (೫)

ಉತ್ಪಲ ಶ್ಯಾಮಲ ಮುದವೆತ್ತ ಬಾವನ್ನವದೀಡಿ
ಅತ್ಯಮಲ ಪೊನ್ನಂಬರ ಸುತ್ತಿದ
ಮತ್ತಾ ನೂಪುರ ಝಣತ್ಕಾರದಿ ಮಿಂಚಿಯೆಮ್ಮ
ಚಿತ್ತಶಿಖಿಗೆ ಪೀಯೂಷ ಸಿಕ್ತ ಮೇಘದಂತೆ ಒಪ್ಪುವ ಶ್ರೀಹರಿಯ |
ಹೆತ್ತ ತಾಯಿ ಆಪ್ತ ಬಂಧು ಗೋತ್ರ ಗತಿ ನೀನೆ ನಮ್ಮ
ಚಿತ್ತವೆಂದು ನಂಬಿ ತನ್ನ ಹತ್ತಿಲಿ ಸಾರಿದವರ
ಒತ್ತಿ ತಾಂ ರಥವನೇರಿ ಸತ್ವರ ಬರುವೆನೆಂದು
ಮತ್ತಕ್ರೂರನೊಡನೈದಿದ ಹೇ ಕಿತವಾ (೬)

ಲಕ್ಷುಮಿ ರಮಣನವ ಸೂಕ್ಷುಮ ಗೊಲ್ಲತೇರಾವು
ಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವು
ಮೋಕ್ಷದರಸು ಅವ ಗೋಕ್ಷೀರದಿ ತೃಪ್ತರಾವು
ಲಕ್ಷಿಸುವದೆಂತೋ ಎಮ್ಮನು ಶ್ರೀ ಹರಿಯು
ರಕ್ಷಿಸಲುದಿಸಿ ಜನರಕ್ಷಣೆಗೆ ಪಾಲ್ಬೆಣ್ಣೆಯ
ಭಕ್ಷಿಸಿ ನಿರುತ ನಮ್ಮ ಅಕ್ಷಿಗೆ ಹಬ್ಬವನುಣಿಸಿ
ಈ ಕ್ಷೋಣಿ ಚರಾಚರ ದೀಕ್ಷಿಗೆ ನರರ ಸಾಮ್ಯವಕ್ಷ-ಮ
ಣರಾದೆವೊ ಮೂರ್ಖರೋ ಹೇ ಕಿತವಾ (೭)

ಹಿಂದೆ ಮಾಡಿದ ಸದ್ಧರ್ಮದಿಂದ ಮಧುರಾ ನಗರದ
ಇಂದೀವರಾಕ್ಷಿಯರಾನಂದ ಸಿಂಧುವಿಗುದಿತ ಪೂರ್ಣ
ಚಂದ್ರನಂತೊಪ್ಪುವ ಸಿರಿ ಮಂದರೋದ್ಧರನಂಘ್ರಿಯ
ಪೊಂದುವ ಭಾಗ್ಯಕ್ಕೆಣೆ ಉಂಟೆ ಶ್ರೀಹರಿಯ |
ಅಂದೆಮ್ಮೊಳು ರಾಸಕ್ರೀಡೆಯಿಂದ ಒಂದಪರಾಧವ
ನೊಂದನನೆಣಿಸದೆ ಸಲಹೆಂದು ಬಿನ್ನೈಸೆ ಸಾಷ್ಟಾಂಗದಿಂದ
ವಂದಿಪೆವೋ ಭಕ್ತ ಬಂಧುವಿಗೆ ನಮ್ಮ ಹೃದಯ
ಮಂದಿರದೊಳೆಂದೆಂದಿರೆಂದು ಹೇ ಕಿತವಾ (೮)

ಹೆಂಗಳೇರೊಂದಾಗಿ ಅಂತರಂಗ ದರಸನಾಡಿದ
ಮಂಗಳ ಚರಿತೆಯನ್ನು ಸಂಗೀತದಿಂ ಪೊಗಳುತ್ತ
ಕಂಗಳಶ್ರುಗಳೆವುತ್ತ ಇಂಗಿತಜ್ಞ ದೇವ-
ನಂಗ ಸಂಗದ ಸುಖವ ನೆನೆದು ಶ್ರೀಹರಿಯ |
ಮಂಗಳ ವೇದಸ್ತೇಯಾರಿ ಶೃಂಗಾರ ಕೂರುಮ ನಮ್ಮ
ಪೊಂಗಣ್ಣನ ಸೀಳ್ದ ನರಸಿಂಗ ವಟು ಭಾರ್ಗವನೆ
ಅಂಗದ ಪಾರ್ಥ ಕಂಬುತುರಂಗಪ ರಂಗವಿಠಲ
ತುಂಗ ಮಹಿಮ ನಮೋ ಎಂಬೆವೋ ಹೇ ಕಿತವಾ (೯)


BRuMgA ninnaTTidanE SrIraMga
madhureli niMdu,
aMgajalubdhaka pUgOlaMgaLa taDeyanikki
aMganEreMbO hulle mRugaMgaLige guriyeccu
hiMgisutaidhAne asuva hE kitavA [pa]

ninna nODe namma acyutanna kaMDaMtAyitayya
cannigararasa kuSalOnnatiyoLihanEnO
ciNNatana modalAgavanna kitava ballevO
gannagAra citta cOranna SrI hariyA |
mannaNege mecci tanuvannoppisida mugude
veNNugaLa virahAbdhiyanne dATisuveneMdu
tanna nEhaveMbO nAveyannErisi mOsadi
naDunIroLu tored~hOdane hE kitavA (1)

tamma naMdagOpa yaSOdammana kaMDu bAreMdu
rammmeya ramaNa ninnanomme kaLuhidanaise
hammugeTTArammaNEriMdummaLisuvevo vRuthA
namma haMbalinnEnavage SrI harige |
hommElaTTadalaMceyagammanEra kucada
kuM-kumma kastUriya karadimmanadi silukidaMge
kammagOlana bANaMgaLummaLi nOyisutive
summane bAhOdu sulaBave hE kitavA (2)

madhukuMja vanadalli madhuvairi koLalanUdalu
madhura nisvana kELi madirAkShiyarella
dhAmada dhyAnava biTTu mRugamadagupaviDi
daidi madananayyana kANuta SrI hariya |
mudavEri talebAgi mEdini niTTisalAga
mRuduvAkyadoLemmappi adharAmRuta BOjanak-
kodaguva satata sannaddha nammanagali
kalledeyAdaneMtO kRupALu hE kitavA (3)

vajrAMkuSa dhvajAMkita hejjeyannE tiLida
nammabjAkShiyaroDane rati kajjadupavanadalli
nirjanarOttaMsaroDane majjana krIDeyADuva
sAyujya suKavattalippavo SrI hariya |
abjaBava munijana pUjyanagalida myAle
nirjIvigaLAgi kaNNa kajjala kalakikoMDu
lajjegeTTu tanulate jarJaritadi jIvise
vajjaredeyallave nammadu hE kitavA (4)

kattUriya baTTaniTTu muttina jolledurubinali
kastUri tilaka calat kuMDalaveLagu
vRuttavadanadi maMdasmita tiMgaLiMdalemma
hRuttApa pariharisuva SrIhariya |
matte vakShada SrIvatsa kaustuBa vaijayaMti mAle
SrI tulasi Gama Gamisuttaliha vanamAle
ratuna kaMkaNa BujakIrtiyiMdoppuva
puruShOttamanna baNNiparuMTE hE kitavA (5)

utpala SyAmala mudavetta bAvannavadIDi
atyamala ponnaMbara suttida
mattA nUpura JaNatkAradi miMciyemma
cittaSiKige pIyUSha sikta mEGadaMte oppuva SrIhariya |
hetta tAyi Apta baMdhu gOtra gati nIne namma
cittaveMdu naMbi tanna hattili sAridavara
otti tAM rathavanEri satvara baruveneMdu
mattakrUranoDanaidida hE kitavA (6)

lakShumi ramaNanava sUkShuma gollatErAvu
kukShiyoLu bommAMDavavage makShikagaLaMtippevu
mOkShadarasu ava gOkShIradi tRuptarAvu
lakShisuvadeMtO emmanu SrI hariyu
rakShisaludisi janarakShaNege pAlbeNNeya
BakShisi niruta namma akShige habbavanuNisi
I kShONi carAcara dIkShige narara sAmyavakSha-ma
NarAdevo mUrKarO hE kitavA (7)

hiMde mADida saddharmadiMda madhurA nagarada
iMdIvarAkShiyarAnaMda siMdhuvigudita pUrNa
caMdranaMtoppuva siri maMdarOddharanaMGriya
poMduva BAgyakkeNe uMTe SrIhariya |
aMdemmoLu rAsakrIDeyiMda oMdaparAdhava
noMdananeNisade salaheMdu binnaise sAShTAMgadiMda
vaMdipevO Bakta baMdhuvige namma hRudaya
maMdiradoLeMdeMdireMdu hE kitavA (8)

heMgaLEroMdAgi aMtaraMga darasanADida
maMgaLa cariteyannu saMgItadiM pogaLutta
kaMgaLaSrugaLevutta iMgitaj~ja dEva-
naMga saMgada suKava nenedu SrIhariya |
maMgaLa vEdastEyAri SRuMgAra kUruma namma
poMgaNNana sILda narasiMga vaTu BArgavane
aMgada pArtha kaMbuturaMgapa raMgaviThala
tuMga mahima namO eMbevO hE kitavA (9)

Leave a Reply

Your email address will not be published. Required fields are marked *

You might also like

error: Content is protected !!