Composer : Shri Pradyumna Tirtharu
Shri Vadeendra Tirtharu : 1728-1750
Ashrama Gurugalu – Sri Upendra Tirtharu
Ashrama Shishyaru – Sri Varadendra Tirtharu
Vrundavana @ MANTRALAYA
ವಂದಾರುಜನಸಂದೋಹಮಂದಾರತರುಸನ್ನಿಭಮ್ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್
vaMdaarujanasaMdOhamaMdaaratarusannibham |
vRuMdaarakagurupraKyaM vaMdE vaadIMdradEshikam
ವಾದೀಂದ್ರ ಗುರುರಾಜ ನಿನ್ನ
ಪಾದವ ತೋರಿಸಯ್ಯಾ
ವಾದೀಂದ್ರ ಗುರು ನಿನ್ನ ಪಾದವ ನಂಬಿದೆ
ಮೋದವಾ ಕೊಡುವುದು ಮದಗಳೋಡಿಸಿ (ಪ)
ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯ
ಪಾಪರಾಶಿಯ ಸುಟ್ಟು ದ್ರೌಪದೀ ವರದನ
ಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ [೧]
ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರ
ಶೀಲಾದಿ ಗುಣವಿತ್ತು ಶ್ರೀ ಲೋಲನಂಘ್ರಿಯ
ಮಲಿನ ಮನವ ಕಳದು ಪೊಳೆಯುವಂತೆ ಮಾಡೋ [೨]
ತುಂಗಾ ತೀರದೊಳಿದ್ದು ನಿತ್ಯ ಭಂಗಗಳೋಡಿಸುವಿ
ಶೃಂಗಾರ ತುಳಸಿಯ ಮಂಗಳ್ಹಾರವ ಧರಿಸಿ
ತುಂಗಮಹಿಮ ನರಸಿಂಗ ಮೂರುತಿ ತೋರೊ [೩]
vAdIMdra gururAja ninna
pAdava tOrisayyA
vAdIMdra guru ninna pAdava naMbide
mOdavA koDuvudu madagaLODisi (pa)
upEMdra karakamalajAta pApagaLODisayya
pAparASiya suTTu draupadI varadana
kRupeyAguvaMte mADO SrIpati priyane [1]
mUlarAmara pAdapadumadi aLiyaMtippa dhIra
SIlAdi guNavittu SrI lOlanaMGriya
malina manava kaLadu poLeyuvaMte mADO [2]
tuMgA tIradoLiddu nitya BaMgagaLODisuvi
SRuMgAra tuLasiya maMgaLhArava dharisi
tuMgamahima narasiMga mUruti tOro [3]
Leave a Reply