Composer : Shri Gurugovinda dasaru on Shri Mohana dasaru
ಮೋಹನಾರ್ಯನೆ ಯೆನ್ನಾ |
ಪೀಡಿಸುವ ಭವ ಮೋಹ ಕಳೆವುದು ಮುನ್ನಾ |
ಹರಿಯಂಘ್ರಿ ಭಜನೆಯ ಈಹ ಕೊಡುವುದು ಇನ್ನಾ |
ಭೂಸುರವರೇಣ್ಯಾ [ಪ]
ದೇಹ ಮಮತೆಯ ದಾಶೆಯಲಿ ಸುಖ |
ವಾಹಿನಿಗಳನುಭವಿಸೆ ಬಲುದುರ್ ದೇಹ
ಪೋಷಣೆಗೈದು ಹರಿಪದ |
ಈಹಿಸದೆ ಬಲುನೊಂದೆ ಭವದಲಿ [ಅ.ಪ]
ಜಯದಲುದಿಸುತಲಂದೂ |
ತಾರುಣ್ಯವನುನಿರ್ ಭಯದಿ ಕಳೆದಿಹೆ ಬಂಧೂ |
ವಿದ್ವೇಷದೊಳಗ್ಹರಿ ಹಯನನುಜ ವರ್ತಿಗಳಂದೂ |
ಸಲಹಿದರು ಎನ್ನಯ ಭಯ ನಿವಾರಿಸುತೆಂದೂ |
ಕಾರುಣ್ಯ ಸಿಂಧೂ ||
ಹಯಮುಖನ ಪದ ಸತ್ಸರೋಜಗಳ್ |
ದ್ವಯಭಜಿಪ ಮನವಿರದೆ ವಿಷಯದ
ಹುಯಿಲಿನಲಿ ಬೆಂಡಾಗಿ ತಾಪದ |
ತ್ರಯದಿ ಬಲು ಬಳಲಿರುವೆನಯ್ಯ |
ಜಯದ ಸಂವತ್ಸರವು ಬರಳಿ |
ಬಯಲು ಆಗದ ಮುನ್ನ ಹರಿಪದ
ದ್ವಯಗಳನು ಕಾಂಬಂಥ ಹದನವ |
ದಯದಿ ತೋರುತ ಸಲಹೊ ಬಂಧು [೧]
ಕಾಮಮದ ಮಾತ್ಸರ್ಯಾ |
ಅರಿಗಳೆನಮ ನನೇಮನಿಷ್ಟಯ ಚರ್ಯಾ |
ಕುಂದಿಸುತ ವಿಷಯ ಸ್ತೋಮ ಕಳೆಯುವರಯ್ಯ |
ಈ ಪರಿಯ ಪರಿಭವ ಸೀಮೆ ಮೀರುವ ಚರ್ಯಾ |
ಪರಿಹರಿಸೊ ಜೀಯ ||
ಭ್ರಾಮಕತ್ರಯ ಮಾರಿಗೆನ್ನ ಸು |
ಹೋಮಿಸುವ ದುರುಳನನು ಸದೆವ
ತಾಮರಸಭವ ಪದಕೆ ಬರುತಿಹ |
ಆ ಮಹಾ ಮಾರುತ ನೊಳಿರುವ |
ರಾಮ ಚಂದ್ರ ಪದಾರವಿಂದವ |
ಕಾಮಿಸುತ ತನ್ಮಹಿಮೆಗಳ ಸನ್ನಾಮ
ಕೀರ್ತನೆಗೈದು ಮೋದಿಪ |
ಪ್ರೇಮಮನವಿತ್ತೆನ್ನ ಸಲಹೋ [೨]
ನೀರೊಳಾಡುತ ಬಂದಾ |
ಬೆನ್ನಿನಲಿ ಬಹು ಭಾರ ಪೊತ್ತುದೆ ಛಂದಾ |
ಅವನಿಯನು ತನ್ನ ಕೋರೆದಾಡೆಗಳಿಂದಾ |
ತರಳನನು ಬಹು ಘೋರರೂಪದಲಿಂದಾ |
ಸಲಹಿದುದೆ ಛಂದಾ ||
ಮೂರು ಪಾದವ ಬೇಡಿ ಬಲಿಯನು |
ಭಾರಿ ಕೊಡಲಿಯ ಪೆತ್ತು ಪೆಗಲೋಳು |
ಘೋರ ಅಟವಿಯ ತಿರುಗಿ ತಿರುಗಿ |
ನಾರೆರೊಲುಮೆಗೆ ಸಿಲ್ಕಿ ತ್ರಿಪುರದ
ನಾರಿಯರ ವ್ರತಗೆಡಿಸಿ ಹಯವನು |
ಏರ್ದ ಗುರುಗೋವಿಂದ ವಿಠ್ಠಲಕಾರಣನು
ಜಗಕೆಂಬ ಮತಿಯನು |
ಧೀರಗುರು ಮೋಹನ್ನ ಕರುಣಿಸು [೩]
mOhanAryane yennA |
pIDisuva Bava mOha kaLevudu munnA |
hariyaMGri Bajaneya Iha koDuvudu innA |
BUsuravarENyA [pa]
dEha mamateya dASeyali suKa |
vAhinigaLanuBavise baludur dEha
pOShaNegaidu haripada |
Ihisade balunoMde Bavadali [a.pa]
jayadaludisutalaMdU |
tAruNyavanunir Bayadi kaLedihe baMdhU |
vidvEShadoLag~hari hayananuja vartigaLaMdU |
salahidaru ennaya Baya nivArisuteMdU |
kAruNya siMdhU ||
hayamuKana pada satsarOjagaL |
dvayaBajipa manavirade viShayada
huyilinali beMDAgi tApada |
trayadi balu baLaliruvenayya |
jayada saMvatsaravu baraLi |
bayalu Agada munna haripada
dvayagaLanu kAMbaMtha hadanava |
dayadi tOruta salaho baMdhu [1]
kAmamada mAtsaryA |
arigaLenama nanEmaniShTaya caryA |
kuMdisuta viShaya stOma kaLeyuvarayya |
I pariya pariBava sIme mIruva caryA |
parihariso jIya ||
BrAmakatraya mArigenna su |
hOmisuva duruLananu sadeva
tAmarasaBava padake barutiha |
A mahA mAruta noLiruva |
rAma caMdra padAraviMdava |
kAmisuta tanmahimegaLa sannAma
kIrtanegaidu mOdipa |
prEmamanavittenna salahO [2]
nIroLADuta baMdA |
benninali bahu BAra pottude CaMdA |
avaniyanu tanna kOredADegaLiMdA |
taraLananu bahu GOrarUpadaliMdA |
salahidude CaMdA ||
mUru pAdava bEDi baliyanu |
BAri koDaliya pettu pegalOLu |
GOra aTaviya tirugi tirugi |
nArerolumege silki tripurada
nAriyara vratageDisi hayavanu |
Erda gurugOviMda viThThalakAraNanu
jagakeMba matiyanu |
dhIraguru mOhanna karuNisu [3]
Leave a Reply