Bhuvanadolagenegaane nimage

Composer : Shri Varadagopala vittala

By Smt.Shubhalakshmi Rao

Shri Bhuvanendra Tirtha : Info.courtesy: Shri Nagaraju Haveri
Period : 1785 – 1799
Ashrama Gurugalu : Sri Varadendra Teertharu
Ashrama Shishyaru : Sri Subhodhendra Teertharu
Aradhana Tithi : Vaishaka Krishna Saptami..
Vrindavana Situated at : Rajoli
भूदॆववंद्यपादाब्जं भूतिमंतमभीष्टदं ।
भूतलॆ सादु विख्यातं भुवनॆंद्र गुरुं भजॆ ॥
ಭೂದೇವವಂದ್ಯಪಾದಾಬ್ಜಂ ಭೂತಿಮಂತಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ ಭುವನೇಂದ್ರಗುರುಂ ಭಜೇ ||


ಭುವನದೊಳಗ್ಯಣೆಗಾಣೆ ನಿಮಗೆ |
ಭುವನೇಂದ್ರ ಭೂಮ
ಸದ್ಗುಣ ಸಂಯಮೀಂದ್ರ || ಪ ||

ಶಮದಲ್ಲಿ ದಮದಲ್ಲಿ
ಶಾಂತತ್ವ ಗುಣದಲ್ಲೀ |
ಕಮನೀಯ ರೂಪದಲ್ಲಿ
ಕರಣ ಶುದ್ಧಿಯಲ್ಲೀ |
ಯಮ ನಿಯಮಾಷ್ಟಾಂಗ
ಯೋಗ ಮೊದಲಾದಲ್ಲೀ |
ವಿಮಲತರ ಮತಿಯಲ್ಲಿ
ವಿತರಣಗಳಲ್ಲೀ ||೧||

ವೇದ ವೇದಾಂಗಗಳ
ಪ್ರವಚನ ವಿಶೇಷದಲ್ಲೀ |
ವಾದಿಗಳ ಗೆಲುವಲ್ಲಿ
ವರವ ಕೊಡುವಲ್ಲೀ |
ಸಾದರದಿ ಸಕಲ
ವಾಕ್ಯಾರ್ಥ ಶೋಧನದಲ್ಲೀ |
ಮೂದಲಿಸಿ ಮನ್ಮಥನ
ಮದವ ಮುರಿವಲ್ಲೀ || ೨||

ವರದೇಂದ್ರಯತಿ ಕುಲೇಂದ್ರರ
ಕುವರ ನಾ ನಿಮ್ಮ |
ವರಣಿಸಲೊಶವೇ
ವರ ಗುಣಗಳ |
ವರದ ಗೋಪಾಲವಿಠ್ಠಲ
ರಾಮ ವ್ಯಾಸ ಪದ |
ಸರಸಿಜ ಸುಭೃಂಗ
ನಿಸ್ಸಂಗ ಮಂಗಳ ಮಹಿಮ || ೩ ||


BuvanadoLagyaNegANe nimage |
BuvanEMdra BUma
sadguNa saMyamIMdra || pa ||

Samadalli damadalli
SAMtatva guNadallI |
kamanIya rUpadalli
karaNa SuddhiyallI |
yama niyamAShTAMga
yOga modalAdallI |
vimalatara matiyalli
vitaraNagaLallI ||1||

vEda vEdAMgagaLa
pravacana viSEShadallI |
vAdigaLa geluvalli
varava koDuvallI |
sAdaradi sakala
vAkyArtha SOdhanadallI |
mUdalisi manmathana
madava murivallI || 2||

varadEMdrayati kulEMdrara
kuvara nA nimma |
varaNisaloSavE
vara guNagaLa |
varada gOpAlaviThThala
rAma vyAsa pada |
sarasija suBRuMga
nissaMga maMgaLa mahima || 3 ||

Leave a Reply

Your email address will not be published. Required fields are marked *

You might also like

error: Content is protected !!