Munirayara smarane

Composer : Shri Vidyaratnakara Tirtharu

By Smt.Shubhalakshmi Rao

Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami


ಮುನಿರಾಯರ ಸ್ಮರಣೆ ಮಾಡಿರೊ ಮಧ್ವ
ಮುನಿರಾಯರ ಸ್ಮರಣೆ [ಪ]

ಚರಣಕಮಲವ ಭರದಿ ಭಜಿಸುವ
ಧರಣಿ ಸುರರಾದರದಿ ಪೊರೆಯುವ
ತರಣಿ ಮಂಡಲಗಣವ ಗೆಲಿಯುವ
ಹರಿಣವಾಹನನಂಶನಾದ [ಅ.ಪ]

ಕಪಿರೂಪವ ಧರಿಸಿ
ರಾಮನ ಆಜ್ಞೆಯನು ಶಿರದಲಿ ವಹಿಸಿ
ವಾರಿಧಿಯನ್ನು ನಿಮಿಷ ಮಾತ್ರದಿ ಲಂಘಿಸಿ
ದಶವದನನ ಅಶೋಕವನದಲಿ
ಶಶಿಮುಖಿಯ ತಾ ಕಂಡು ವಂದಿಸಿ
ದಶರಥ ಸುತನ ವಾರ್ತೆ ಪೇಳಿ
ನಿಶಿಚರೇಶನ ಪುರವ ದಹಿಸಿದ [೧]

ಕುರುಕುಲದೊಳಗೆ ಪುಟ್ಟಿ
ಮತ್ಸ್ಯಾಧಿಪನ
ನಗರದೊಳಗೆ ತಾ ಜಟ್ಟಿ
ಕಾಳಗದಲ್ಲಿ ಮಲ್ಲರ ತಲೆಯ ಮೆಟ್ಟಿ
ದುರುಳ ದುರ್ಯೋಧನನ ಸೇನೆಯು
ಬರಲು ಪಶುಗಳ ಕದಿಬೇಕೆಂದು
ತರಳ ಪಾರ್ಥನ ಕಳುಹಿ ತಕ್ಷಣ
ತಿರುಗಿ ಓಡಿಸುವಂತೆ ಮಾಡಿದ [೨]

ಪರಬ್ರಹ್ಮ ಅಗುಣನೆಂದು
ಜೀವೇಶರಿಗೆ ಬೇಧವೇ ಇಲ್ಲವೆಂದು
ಪ್ರಪಂಚಕ್ಕೆ ಸತ್ಯತ್ವ ಯಾವುದೆಂದು
ಬೊಗಳುವಂಥ ಮಾಯಿ ಜನಗಳ
ನಿಗಮ ಯುಕುತಿಗಳಿಂದ ಖಂಡಿಸಿ
ಖಗವಾಹನ ನಾಮಗಿರಿ ಸಿರಿ
ನೃಹರಿ ಮೂರುತಿಗರ್ಪಿಸಿದ [೩]


munirAyara smaraNe mADiro madhva
munirAyara smaraNe [pa]

caraNakamalava Baradi Bajisuva
dharaNi surarAdaradi poreyuva
taraNi maMDalagaNava geliyuva
hariNavAhananaMSanAda [a.pa]

kapirUpava dharisi
rAmana Aj~jeyanu Siradali vahisi
vAridhiyannu nimiSha mAtradi laMGisi
daSavadanana aSOkavanadali
SaSimuKiya tA kaMDu vaMdisi
daSaratha sutana vArte pELi
niSicarESana purava dahisida [1]

kurukuladoLage puTTi
matsyAdhipana
nagaradoLage tA jaTTi
kALagadalli mallara taleya meTTi
duruLa duryOdhanana sEneyu
baralu paSugaLa kadibEkeMdu
taraLa pArthana kaLuhi takShaNa
tirugi ODisuvaMte mADida [2]

parabrahma aguNaneMdu
jIvESarige bEdhavE illaveMdu
prapaMcakke satyatva yAvudeMdu
bogaLuvaMtha mAyi janagaLa
nigama yukutigaLiMda KaMDisi
KagavAhana nAmagiri siri
nRuhari mUrutigarpisida [3]

Leave a Reply

Your email address will not be published. Required fields are marked *

You might also like

error: Content is protected !!