Sri Vayu Devarige

Composer : Shri Pranesha dasaru

Smt.Nandini Sripad,Blore

ಶ್ರೀವಾಯುದೇವರಿಗೆ ನೀತವಾದ ।
ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ॥ ಪ ॥

ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು ।
ನಾಲಕ್ಕೊಂದು ದೀರ್ಘ ಜಂಘ ಗ್ರೀವ ॥
ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ ।
ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ॥ 1 ॥

ಕಕ್ಷಿ ಕುಕ್ಷಿಯು ವಕ್ಷ ಕರ್ಣನಖ ಸ್ಕಂದಾರು ।
ರಕ್ಷಘ್ನನಿಗೆ ಶೋಭಿಪವು ಉನ್ನತ ॥
ಅಕ್ಷಿ ಚರಣ ಕರನಖ ಅಧರ ಜಿಹ್ವೇಣು ಜಿಹ್ವೆ ।
ಮೋಕ್ಷದನ ಈ ಯೇಳು ಅವಯವವು ರಕ್ತ ॥ 2 ॥

ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ ।
ಉತ್ತಮ ಲಲಾಟ ಉರದ್ವಯ ವಿಸ್ತಾರಾ ॥
ಸತ್ಯಸಂಕಲ್ಪ ಶ್ರೀಪ್ರಾಣೇಶವಿಠಲನ ।
ಭೃತ್ಯೋತ್ತಮಗೆ ತಕ್ಕು ವಿವಾರಿಗಿಲ್ಲ ॥ 3 ॥


SrIvAyudEvarige nItavAda |
mUvatteraDu sulakShaNagaLanu varNisuve ||pa ||

tAlu jAnugaLu stana tudiyu nAsika cakShu |
nAlakkoMdu dIrGa jaMGa grIva ||
AliMga pRuShTha nAlku hRusva kESarada |
mElAda tvaku beraLu naKa paMca sUkShma || 1 ||

kakShi kukShiyu vakSha karNanaKa skaMdAru |
rakShaGnanige SOBipavu unnata ||
akShi caraNa karanaKa adhara jihvENu jihve |
mOkShadana I yELu avayavavu rakta || 2 ||

satva nABiyu svaravu I mUru gaMBIra |
uttama lalATa uradvaya vistArA ||
satyasaMkalpa SrIprANESaviThalana |
BRutyOttamage takku vivArigilla || 3 ||

Leave a Reply

Your email address will not be published. Required fields are marked *

You might also like

error: Content is protected !!