Composer : Shri Purandara dasaru
ಶ್ರೀ ಗುರು ರಾಯರ ಶರನೆಂಬೆ ಗುರು ಮಧ್ವರಾಯ |ಪ|
ರಾಮವತಾರದಲ್ಲಿ ಹನುಮವಾತಾರ ಮಾಡಿ,
ರಾವಣನ ಭಂಗವ ಮಾಡಿದೆಯೊ ದೊರೆಯೇ |೧|
ಕೃಷ್ಣಾವತಾರದಲ್ಲಿ ಭೀಮಾವತಾರ ಮಾಡಿ,
ಕೌರವರನೆಲ್ಲ ಕೊಂದೇಯೊ ದೊರೆಯೇ |೨|
ವ್ಯಾಸಾವತಾರದಲ್ಲಿ ಮಧ್ವಾವತಾರ ಮಾಡಿ,
ಅದ್ವೈತ ಮತವನ್ನು ಖಂಡಿಸಿದ್ಯೊ ದೊರೆಯೇ |೩|
ಏನು ಪೇಳಲಿ ನಿಮ್ಮ ಅವತಾರ ತ್ರಯಂಗಳ
ವರ್ಣಿಸಲಳವಲ್ಲ ಭಾರತಿ ರಮಣ
ಆವ ಬಗೆಯಿಂದ ಪುರಂದರ ವಿಠಲನ
ದಾಸರ ಸಲಹುವ ವರ ಕಲ್ಪತರುವೇ |೪|
shrI guru rAyara sharaneMbe guru madhvarAya |pa|
rAmavatAradalli hanumavAtAra mADi,
rAvaNana bhaMgava mADideyo doreyE |1|
kRuShNAvatAradalli bheemAvatAra mADi,
kauravaranella koMdEyo doreyE |2|
vyAsAvatAradalli madhvAvatAra mADi,
advaita matavannu khaMDisidyo doreyE |3|
Enu pELali nimma avatAra trayaMgaLa
varNisalaLavalla bhArati ramaNa
Ava bageyiMda puraMdara viThalana
dAsara salahuva vara kalpataruvE |4|
Leave a Reply