Januma janumadali

Composer : Shri Vidyaprasanna Tirtharu

ಜನುಮ ಜನುಮದಲಿ ಎನಗಿರಲಿ |
ಹನುಮ ಭೀಮ ಮಧ್ವ ಮುನಿಗಳ ಸೇವೆಯು || ಪ ||

ಮಾತರಿಶ್ವನೇ ಪ್ರೀತನಾಗಿ |
ಅಜ ತಾತನು ಸುಲಭದಿ ಒಲಿಯುವನು |
ಕೋತಿಯ ರೂಪದಿ ಭೂತಳದಲಿ ಬಲು ||
ಖ್ಯಾತಿ ಪಡೆದ ರಾಮ ದೂತರ ಸೇವೆಯು || ೧ ||

ಹರನ ಭಕುತ ಜರಾಸಂಧನ ಕಾಯವ |
ತರಿದು ಮುರಿದು ಬಲು ಸುಲಭದಲಿ |
ಹರಿಗಪರೋಕ್ಷದಿ ಅರ್ಪಣೆ ಮಾಡಿದ |
ಕುರುಕುಲ ಪತಿ ಬಲ ಭೀಮರ ಸೇವೆಯು || ೨ ||

ಶುದ್ಧ ದ್ವಿಜಕುಲದಿ ಉದ್ಭವಿಸುತ |
ಅನಿರುದ್ಧನಿಗ್ ಅನುಮತವಾಗಿರುವ |
ಸಿದ್ಧಾಂತದ ಪದ್ಧತಿಯನು ತೋರಿದ |
ಮಧ್ವಮತದ ತತ್ತ್ವದಲ್ಲಿ ಪ್ರಸನ್ನತೆ || ೩ ||


januma janumadali enagirali |
hanuma bheema madhva munigaLa sEveyu || pa ||

mAtarishvanE preetanAgi |
aja tAtanu sulabhadi oliyuvanu |
kOtiya roopadi bhootaLadali balu ||
khyAti paDeda rAma dootara sEveyu || 1 ||

harana bhakuta jarAsaMdhana kAyava |
taridu muridu balu sulabhadali |
harigaparOkShadi arpaNe mADida |
kurukula pati bala bheemara sEveyu || 2 ||

shuddha dvijakuladi udbhavisuta |
aniruddhanig anumatavAgiruva |
siddhAMtada paddhatiyanu tOrida |
madhvamatada tattvadalli prasannate || 3 ||

Leave a Reply

Your email address will not be published. Required fields are marked *

You might also like

error: Content is protected !!