Composer : Shri Purandara dasaru
ವೀರ ಹನುಮ ಬಹು ಪರಾಕ್ರಮ
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ|
ರಾಮದೂತ ನೆನಿಸಿಕೊಂಡೆ ನೀ ,
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ,
ಜಗತಿಗೆಲ್ಲ ಹರುಷವಿತ್ತು
ಚೂಡಾ-ಮಣಿಯ ರಾಮಗಿತ್ತು
ಲೊಕಕೆ ಮುದ್ದೆನಿಸಿ ಮೆರೆವ ||೧||
ಗೋಪಿ-ಸುತನ ಪಾದ ಪೂಜಿಸಿ
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ
ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ
ಸಂಗ್ರಾಮ ಧೀರನಾಗಿ ಜಗದಿ ||೨||
ಮಧ್ಯಗೇಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮತ್ಸರಿಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ
ಸಮ್ಮುಖದಿ ಭಾಷ್ಯ ಮಾಡಿ
ಸಜ್ಜನ ಪೊರೆವ ಮುದ್ದು ಪುರಂದರ
ವಿಠ್ಠಲನ ದಾಸ ||೩||
veera hanuma bahu parAkrama
suj~jAnavittu pAlisenna jeevarOttama |pa|
rAmadUta nenisikoMDe nee ,
rAkShasara vanavanella kittu baMde nee
jAnakige mudreyittu ,
jagatigella haruShavittu
chUDA-maNiya rAmagittu
lokake muddenisi mereva ||1||
gOpi-sutana pAda poojisi
gadeya dharisi bakAsurana saMhariside
draupadiya moreya kELi
matte keechakanna koMdu
bheemaneMba nAma dharisi
saMgraama dhIranAgi jagadi ||2||
madhyagEhanalli janisi nee
bAlyadalli matsariya rUpagoMDe nee
satyavatiya sutana bhajisi
sammukhadi bhAShya mADi
sajjana poreva muddu puraMdara
viThThalana dAsa ||3||
Leave a Reply