Composer : Shri Jayesha vittala
ಬ್ರಹ್ಮಾಂಡ ಕೋಟಿಗೆ ನಮ್ಮತಿರುಮಲ
ಪರಬೊಮ್ಮ ಸುರಸಾರ್ವಭೌಮಾ || ಪ ||
ಅಮ್ಮಮ್ಮ ಈ ಕಲಿಯ ಹಮ್ಮಳಿದು ಸ್ವಜನಕನು |
ಪಮ್ಮ ಸುಖಗಳನೀವ ಪರಾತ್ಪರ ಪರಿಪೂರ್ಣಾ || ಅ.ಪ ||
ಅರುಣಾಬ್ಜಚರಣಗಳ ಅರಿಧರಾಗದೆಪದುಮ |
ಮರುಚಿರಾ ರೇಖೆಗಳು ಸ್ವರತಾ |
ಶಿರಿಚರಣ ಕಮಲಯುಗ ಶಶಿನಿಖರ ನಖಪಂಕ್ತಿ |
ಸರಸಿಜಾದ ಬೆರಳು ಮಮತಾ ||
ಸರಿ ಬಂದ ಬಂದಂತೆ ಹರಿದಾಸರಾ ಹೃದಯ |
ಸರಸಿಜದಿ ನೆಲೆಗೊಳಿಪ ಚರಿತಾ |
ಶಿರಿಸಹಿತ ಹರ ವಿರಿಂಚಾದಿಗಳ ಹೃದ್ವನಜ |
ಅರಳಿಸುವ ರವಿಯನ್ನು ನೆರೆಯಲೆಂದಾನಮಿಪೇ || ೧ ||
ಅನವರತ ಅನಾದಿ ಆದಿವ್ಯಾಧಿಗಳೆಲ್ಲ |
ಕ್ಷಣದಲ್ಲಿ ಅಳಿವಂತ ಅಮೃತಾ |
ಖಣಿಪಾದ ಗುಣಪೂರ್ಣ ಆನಂದಮಯ ದ್ಯುಮಣಿ |
ಪ್ರಣತಾರ್ಥಿಹರನೆಂದು ಖಚಿತಾ ||
ಕ್ಷಣಕ್ಷಣಕೆ ನವನವಾನಂದ ಕರಗುಣ ಖಣಿಯು |
ವನಜ ಜಾಂಡದ ನಿಧಿಯು ಅಮಿತಾ |
ಕನಕಾಬ್ಜಮಂಡಲದಿ ರಾಜಿಸುವ ಕೈವಲ್ಯ |
ದನಿಮಿತ್ತ ನಿಧಿ ನಮ್ಮ ಅಗಲದಿರಲೀ ಸತತಾ || ೨ ||
ಧಿಟ್ಟ ಮಂಗಳಮೂರ್ತಿ ಮಾರಮಣ ಜಗಜಟ್ಟಿ |
ಬಿಟ್ಟಿರನು ಭಕ್ತರನು ಪೊರೆವಾ |
ಬೆಟ್ಟ ಬೆಂಕಿ ವನದಿ ಕಟ್ಟುಗ್ರ ವಿಷಬಾಧೆ |
ತಟ್ಟದಂದದಿ ಮಾಡಿ ಛಲವಾ ||
ಕಟ್ಟಿ ಕಂಭವ ಸೀಳಿ ಅಟ್ಟಹಾಸದಿ ಪುಟಿದು |
ಕುಟ್ಟಿ ಖಳನಾ ಕರಳ ಸರವಾ |
ಇಟ್ಟ ಕೊರಳೊಳು ಪುಟ್ಟ ಭಕ್ತನ ಶಿರದಿ ಕಣ್ |
ತೊಟ್ಟಿಟ್ಟ ಜಯೇಶವಿಠ್ಠಲನೆ ಮುಖತೋರೋ || ೩ ||
brahmAMDa kOTige nammatirumala
parabomma surasArvaBaumA || pa ||
ammamma I kaliya hammaLidu svajanakanu |
pamma suKagaLanIva parAtpara paripUrNA || a.pa ||
aruNAbjacaraNagaLa aridharAgadepaduma |
marucirA rEKegaLu svaratA |
SiricaraNa kamalayuga SaSiniKara naKapaMkti |
sarasijAda beraLu mamatA ||
sari baMda baMdaMte haridAsarA hRudaya |
sarasijadi nelegoLipa caritA |
Sirisahita hara viriMcAdigaLa hRudvanaja |
araLisuva raviyannu nereyaleMdAnamipE || 1 ||
anavarata anAdi AdivyAdhigaLella |
kShaNadalli aLivaMta amRutA |
KaNipAda guNapUrNa AnaMdamaya dyumaNi |
praNatArthiharaneMdu KacitA ||
kShaNakShaNake navanavAnaMda karaguNa KaNiyu |
vanaja jAMDada nidhiyu amitA |
kanakAbjamaMDaladi rAjisuva kaivalya |
danimitta nidhi namma agaladiralI satatA || 2 ||
dhiTTa maMgaLamUrti mAramaNa jagajaTTi |
biTTiranu Baktaranu porevA |
beTTa beMki vanadi kaTTugra viShabAdhe |
taTTadaMdadi mADi CalavA ||
kaTTi kaMBava sILi aTTahAsadi puTidu |
kuTTi KaLanA karaLa saravA |
iTTa koraLoLu puTTa Baktana Siradi kaN |
toTTiTTa jayESaviThThalane muKatOrO || 3 ||
Leave a Reply