Composer : Shri Jayesha vittala
ಶರಣು ಶ್ರೀಗುರುಸಂತತಿಗೆ ಸಂತತ ಶರಣು ಶರಣು ||ಪ||
ಶರಣು ಶ್ರೀಗುರುಪಾದಧೂಳಿಗೆ ಶರಣು ಅಭಯಾ ರೂಪಗೆ |
ಶರಣು ಮನ್ಮನ ಕರಣ ಜ್ಞಾನದಿ ವ್ಯಾಪ್ತನಾಗಿಹ ಆಪ್ತಗೆ ||ಅ. ಪ ||
ಶರಣು ಒಡೆಯನ ಒಡತಿ ಮಾತೆಗೆ ಪುತ್ರ ಪೌತ್ರರ ಚರಣಕೆ |
ಶರಣು ಗುರು ಚರಣಾರವಿಂದದಿ ಮೆರೆವ ಭಕ್ತ ಸಮೂಹಕೆ ||
ಶರಣು ವಿಜಯ ರಾಮಚಂದ್ರಗೆ ವೆಂಕಟ ದಾಸಾರ್ಯಗೆ |
ಶರಣು ಪ್ರಸನ್ನ ವೆಂಕಟಾರ್ಯಗೆ ಶರಣು ಜಗನ್ನಾಥ ದಾಸಗೆ ||
ಶರಣು ಗೋಪಾಲದಾಸರಾಯಗೆ ಅವರ ಶಿಶ್ಯ ಸಮೂಹಕೆ |
ಶರಣು ಮೋಹನದಾಸರಾಯಗೆ ಶರಣು ವಿಜಯರಾಯಗೆ ||
ಶರಣು ತಂದೆ ವರದ ಅಭಿನವ ಮಧ್ವಪತಿ ವಿಠ್ಠಲರಾಯರ |ಸಹ |
ಮೆರೆವ ಪುರಂದರ ದಾಸರತ್ನಗೆ ಅಶೇಷ ಗುರುಕುಲ ಜಲಧಿಗೆ ||
ಶರಣು ಮಂತ್ರಾಲಯದ ನಿಲಯಗೆ ಶರಣು ಚಂದ್ರಿಕಾಚಾರ್ಯಗೆ |
ಶರಣು ಶ್ರೀ ರಂಗವಿಠ್ಠಲ ನಾಪ್ತಗೆ ಶರಣು ಶ್ರೀ ಜಯತೀರ್ಥಗೆ ||
ಶರಣು ಶ್ರೀಗುರು ವಾದಿರಾಜಗೆ ಶರಣು ಸಿದ್ಧ ಸಮೂಹಕೆ |
ಶರಣು ಹನುಮ ಭೀಮಸೇನಗೆ ಶರಣು ಗುರುಮಧ್ವರಾಯಗೆ ||
ಶರಣು ಶರಣು ಪರಿಮಳಾಂಗಗೆ ಶರಣು ಅಪ್ಪಣ್ಣ ಕೀರ್ತಿಗೆ |
ಶರಣು ಶ್ರೀಭಾರತೀಶ ಮುಖ್ಯಪ್ರಾಣ ಗುರುಕುಲ ತಿಲಕಗೆ ||
ಪುನಹ ಶರಣೆಂಬೆ ಪುಣ್ಯ ಮೂರ್ತಿಗೆ ಪೂಜ್ಯ ಪೂಜ್ಯ ಪ್ರಪೂಜ್ಯಗೆ |
ಶರಣು ವಾತಾತ್ಮ ಶ್ರೀಗುರು ಜಯೇಶ ವಿಠ್ಠಲ ವಿಷ್ಣುಗೆ ||
SaraNu SrIgurusaMtatige saMtata SaraNu SaraNu ||pa||
SaraNu SrIgurupAdadhULige SaraNu aBayA rUpage |
SaraNu manmana karaNa j~jAnadi vyAptanAgiha Aptage ||a. pa ||
SaraNu oDeyana oDati mAtege putra pautrara caraNake |
SaraNu guru caraNAraviMdadi mereva Bakta samUhake ||
SaraNu vijaya rAmacaMdrage veMkaTa dAsAryage |
SaraNu prasanna veMkaTAryage SaraNu jagannAtha dAsage ||
SaraNu gOpAladAsarAyage avara SiSya samUhake |
SaraNu mOhanadAsarAyage SaraNu vijayarAyage ||
SaraNu taMde varada aBinava madhvapati viThThalarAyara |saha |
mereva puraMdara dAsaratnage aSESha gurukula jaladhige ||
SaraNu maMtrAlayada nilayage SaraNu caMdrikAcAryage |
SaraNu SrI raMgaviThThala nAptage SaraNu SrI jayatIrthage ||
SaraNu SrIguru vAdirAjage SaraNu siddha samUhake |
SaraNu hanuma BImasEnage SaraNu gurumadhvarAyage ||
SaraNu SaraNu parimaLAMgage SaraNu appaNNa kIrtige |
SaraNu SrIBAratISa muKyaprANa gurukula tilakage ||
punaha SaraNeMbe puNya mUrtige pUjya pUjya prapUjyage |
SaraNu vAtAtma SrIguru jayESa viThThala viShNuge ||
Leave a Reply