Raga:Neelambari
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ ಶ್ರೀನರಸಿಂಹದೇವರ ಪ್ರಾರ್ಥನಾ ಸುಳಾದಿ
(ಗುರುಗಳಾದ ಶ್ರೀಭುವನೇಂದ್ರತೀರ್ಥರಿಂದ
ಆಶ್ರಮ ಸ್ವೀಕರಿಸಿದ ನಂತರ,
ಶ್ರೀವಿಭುದೇಂದ್ರತೀರ್ಥ ಕರಾರ್ಚಿತ ಷೋಡಶ ಬಾಹು ನರಸಿಂಹದೇವರನ್ನು ಕೊಟ್ಟಾಗ ಮಾಡಿದ್ದು.)
ಧ್ರುವತಾಳ
ಸೃತಿ ವಾರಾಧಿಯೊಳಗೆ ಶಳವಿಗೆ ಪೋಗುವಂಗೆ
ಗತಿಯಾಗಿ ಧಡಕೆ ಸೇರಿಸಿದ್ಯೋ ಸ್ವಾಮಿ
ಯತಿ ಮಾಡಿ ಕೂಡಿಸಿದಿ ನಿನ್ನ ಪಾದಾಂಬುಜದಲ್ಲಿ
ರತಿ ಕೊಟ್ಟು ಉದ್ಧರಿಸೊ ವಾಸುದೇವವಿಟ್ಠಲ || ೧ ||
ಮಟ್ಟತಾಳ
ಮುದಕಿಯ ಕೈಯಲ್ಲಿ ಪುಲಿವಶವಾದಂತೆ
ಮದಡನ ಕೈಯಲ್ಲಿ ಸಿಕ್ಕಿದ್ಯೋ ನರಹರಿಯೆ
ಒದಗಿ ಸೇವೆಯ ಮಾಡಲಾರೆ ಜರೆಯು ಬಂತು
ಮುದದಿ ತುತಿಯ ಮಾಡಲಾಪಿನೆ ಸಹಸ್ರ
ವದನಗೆ ವಶವಲ್ಲ ವಾಸುದೇವವಿಟ್ಠಲ || ೨ ||
ತ್ರಿವಿಡಿತಾಳ
ದಾನವಿಲ್ಲದಾಶ್ರಮ ಯಜನವು ಮೊದಲಿಲ್ಲ
ಸ್ನಾನ ಮಾತ್ರವು ಮಾಡಿ ನಿನ್ನ ಮೂರುತಿಗಳನು
ಧ್ಯಾನವ ಮಾಡಿಸೊ ಅನುದಿನ ತಪ್ಪದೆ
ಹೀನರ ಕೃತಿಯನ್ನೆ ಖಂಡನೆ ಮಾಡಿಸೊ
ಜ್ಞಾನ ಪುಟ್ಟುವಂತೆ ಪ್ರವಚನ ಮಾಡಿಸೊ
ದೀನವತ್ಸಲ ವಾಸುದೇವವಿಟ್ಠಲರೇಯಾ || ೩ ||
ಅಟ್ಟತಾಳ
ಪಾಮರ ಜನರೊಳು ಸಿಕ್ಕಿದೆ ನಿನ್ನಯ
ನಾಮವ ಪೇಳುವ ಜನರನ್ನ ಕಾಣಿನೊ
ಸ್ವಾಮಿ ಏನುಗತಿ ಎನ್ನ ಹೃದಯವೆಂಬ
ಧಾಮದಿ ಪೊಳಿಯೊ ವಾಸುದೇವವಿಟ್ಠಲ್ಲ || ೪ ||
ಏಕತಾಳ
ಕಾಕ ಕುಲದೊಳು ಕೋಕಿಲ ದಣಿವಂತೆ
ಕೂಕ ಜನರೊಳು ಸಿಕ್ಕಿದೆ ನರಹರೆ
ಲೋಕಧ್ಹರಟಿಗಳಲ್ಲದೆ ಉತ್ತಮ –
ಶ್ಲೋಕನ ವಾರ್ತಿ ನುಡಿವವರಿಲ್ಲವೋ
ಪಾಕಶಾಸನನನುಜ ಪೊರಿಯೊ ಕೇಳೆನ್ನ
ವಾಕು ಹೇ ವಾಸುದೇವವಿಟ್ಠಲ || ೫ ||
ಜತೆ
ಯಾತಕ್ಕೆ ನರಸಿಂಹ ನೀನೆವೇ ಎನ್ನ ಬೆ –
ನ್ನಾತು ರಕ್ಷಿಸೊ ವಾಸುದೇವವಿಟ್ಠಲರೇಯಾ ||
ಲಘುಟಿಪ್ಪಣಿ:
ಸೃತಿ ವಾರಾಧಿಯೊಳಗೆ = ಸರತಿನೊಳಗೆ ;
ಕೂಕ ಜನರೊಳು = ಕುಹಕ ಜನರೊಳು ;
SrIvyAsatatvaj~jatIrtha viracita SrInarasiMhadEvara prArthanA suLAdi
(gurugaLAda SrIBuvanEMdratIrthariMda
ASrama svIkarisida naMtara,
SrIviBudEMdratIrtha karArcita ShODaSa bAhu narasiMhadEvarannu koTTAga mADiddu.)
dhruvatALa
sRuti vArAdhiyoLage SaLavige pOguvaMge
gatiyAgi dhaDake sErisidyO svAmi
yati mADi kUDisidi ninna pAdAMbujadalli
rati koTTu uddhariso vAsudEvaviTThala || 1 ||
maTTatALa
mudakiya kaiyalli pulivaSavAdaMte
madaDana kaiyalli sikkidyO narahariye
odagi sEveya mADalAre jareyu baMtu
mudadi tutiya mADalApine sahasra
vadanage vaSavalla vAsudEvaviTThala || 2 ||
triviDitALa
dAnavilladASrama yajanavu modalilla
snAna mAtravu mADi ninna mUrutigaLanu
dhyAnava mADiso anudina tappade
hInara kRutiyanne KaMDane mADiso
j~jAna puTTuvaMte pravacana mADiso
dInavatsala vAsudEvaviTThalarEyA || 3 ||
aTTatALa
pAmara janaroLu sikkide ninnaya
nAmava pELuva janaranna kANino
svAmi Enugati enna hRudayaveMba
dhAmadi poLiyo vAsudEvaviTThalla || 4 ||
EkatALa
kAka kuladoLu kOkila daNivaMte
kUka janaroLu sikkide narahare
lOkadhharaTigaLallade uttama –
SlOkana vArti nuDivavarillavO
pAkaSAsanananuja poriyo kELenna
vAku hE vAsudEvaviTThala || 5 ||
jate
yAtakke narasiMha nInevE enna be –
nnAtu rakShiso vAsudEvaviTThalarEyA ||
laGuTippaNi:
sRuti vArAdhiyoLage = saratinoLage ;
kUka janaroLu = kuhaka janaroLu ;
Leave a Reply