Tariso Shrihari namma

Composer : Shri Purandara dasaru

By Smt.Shubhalakshmi Rao

ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ||
ತಾರಿಸೋ ಭವ ನಿವಾರಿಸೋ
ನಿನ್ನ ಪಾದ ತೋರಿಸೋ
ವೈಕುಂಠವಾಸ ರಂಗಯ್ಯ |ಅ.ಪ|

ಪಾಪ ವಿನಾಶವ ಮಾಡುವೆ ನೀ
ತಾಪಸಿಯರನು ಸಲಹುವೆ
ವ್ಯಾಪಿಸಿ ನಿನ್ನ ನೆನೆವರ ಕಾಯ್ವ
ಶ್ರೀಪಾಂಡುರಂಗ ಪರಮಾತ್ಮ ಮುಕುಂದ |೧|

ಹಿರಣ್ಯಕಶಿಪುವಿನ ಸೀಳಿದೆ ಅವನ
ಕರುಳ ಕೊರಳೊಳು ಹಾಕಿದೆ
ದುರುಳ ರೂಪದ ದೈತ್ಯನ ಕೊಂದು
ಕರುಣದಿಂದಲಿ ಕಂದಗೊಲಿದ ಗೋವಿಂದ |೨|

ಅಸುವ ಪೂತನಿಯ ಹೀರಿದೆ ನೀ
ಶಶಿಮುಖಿಯಭಿಮಾನ ಕಾಯಿದೆ
ಶಿಶುವಾಗಿ ಬಾಲ ಲೀಲೆ ತೋರಿದೆ
ಕುಸುಮನಾಭ ಶ್ರೀ ಪುರಂದರವಿಠಲ |೩|


tArisO SrIhari namma tArisO ||pa||
tArisO Bava nivArisO
ninna pAda tOrisO
vaikuMThavAsa raMgayya |a.pa|

pApa vinASava mADuve nI
tApasiyaranu salahuve
vyApisi ninna nenevara kAyva
SrIpAMDuraMga paramAtma mukuMda |1|

hiraNyakaSipuvina sILide avana
karuLa koraLoLu hAkide
duruLa rUpada daityana koMdu
karuNadiMdali kaMdagolida gOviMda |2|

asuva pUtaniya hIride nI
SaSimuKiyaBimAna kAyide
SiSuvAgi bAla lIle tOride
kusumanABa SrI puraMdaraviThala |3|

Leave a Reply

Your email address will not be published. Required fields are marked *

You might also like

error: Content is protected !!