Composer : Shri Muddu mohana dasaru [Ankita pradana to Subbaraya dasaru]
” ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ
ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ” – ” ಶ್ರೀ ತಂದೆ ಮುದ್ದುಮೋಹನ ವಿಠ್ಠಲ “
ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ [ಪ]
ಕಂದುಗೊರಳ ಪ್ರಿಯನೆ ಅಭಿವಂದಿಪೆನೊ ಸತತ [ಅ.ಪ]
ಶೋಕನಾಶನ ವಿಗತ ಶೋಕನಯ್ಯ ನೀ ಬೇಗ
ವಾಕ್ಕು ಮೊದಲಾದ ಸರ್ವೇಂದ್ರಿಯಗಳಲ್ಲಿ ನಿಂತು
ಲೋಕದೊಳಗೆ ಇವಗೆ ಬೇಕಾದ ವರಗಳನಿತ್ತು
ಲೌಕಿಕ ಮಾರ್ಗವ ಬಿಡಿಸೊ ನಾಕಜನ ಪಿತನೆ (೧)
ಜ್ಞಾನ ಭಕುತಿ ವೈರಾಗ್ಯಗಳೆಲ್ಲವೂ ಇತ್ತು
ಜ್ಞಾನಿಗಳ ಸಹವಾಸದೊಳಗೆ ರತಿಯನೆ ಕೊಟ್ಟು
ಹಾನಿ ವೃದ್ಧಿಗಳು ಏನೇನು ಬಂದರೂ
ಆನಂದವನೆ ಕೊಟ್ಟು ರಕ್ಷಿಸೊ ನರಹರೇ (೨)
ಕಾಮ ಕ್ರೋಧ ಮದ ಮತ್ಸರಗಳ ಕಡಿದು
ನಾಮೋಚ್ಚಾರಣೆ ಎಂಬ ವಜ್ರಕವಚವನೆ ತೊಡಿಸಿ
ತಾಮರಸವಂದ್ಯ ಶಿರಿ ಮುದ್ದುಮೋಹನವಿಠಲ
ಕಾಮಿತಾರ್ಥವ ಕೊಡೊ ಹೃತ್ಪದ್ಮದೊಳಗೆ ಪೊಳೆದು (೩)
” SrI muddumOhanaviThThalaru tamma paTTada SiShyarAda
SrI subbarAya dAsarige nIDida aMkita nAma” – ” SrI taMde muddumOhana viThThala “
taMde muddu mOhana viThala salahabEkivana [pa]
kaMdugoraLa priyane aBivaMdipeno satata [a.pa]
SOkanASana vigata SOkanayya nI bEga
vAkku modalAda sarvEMdriyagaLalli niMtu
lOkadoLage ivage bEkAda varagaLanittu
laukika mArgava biDiso nAkajana pitane (1)
j~jAna Bakuti vairAgyagaLellavU ittu
j~jAnigaLa sahavAsadoLage ratiyane koTTu
hAni vRuddhigaLu EnEnu baMdarU
AnaMdavane koTTu rakShiso naraharE (2)
kAma krOdha mada matsaragaLa kaDidu
nAmOccAraNe eMba vajrakavacavane toDisi
tAmarasavaMdya Siri muddumOhanaviThala
kAmitArthava koDo hRutpadmadoLage poLedu (3)
Leave a Reply