Composer : Shri Purandara dasaru
ರಾಗ: ಆರಭಿ , ಖಂಡಛಾಪುತಾಳ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।
ಪಾಮರರು ತಾವೇನು ಬಲ್ಲರಯ್ಯ ॥ ಪ ॥
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।
ಆ ಅಸ್ಥಿತಗತವಾದ ಅತಿ ಪಾಪವನ್ನು ॥
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ।
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ॥ 1 ॥
ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।
ಒತ್ತಿ ಒಳ ಪೊಗದಂತೆ ಕವಾಟವಾಗಿ ॥
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ।
ಭಕ್ತವರ ಹನುಮಂತನೊಬ್ಬ ತಾ ಬಲ್ಲ ॥ 2 ॥
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।
ಪರಮ ವೇದಗಳೆಲ್ಲ ಪೊಗಳುತಿಹವು ॥
ಸಿರಿಯರಸ ಶ್ರೀಪುರಂದರವಿಠಲನ ನಾಮವನು ।
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ॥ 3 ॥
rAga: AraBi , KaMDaCAputALa
rAma eMbuva eraDu akSharada mahimeyanu |
pAmararu tAvEnu ballarayya || pa ||
rA eMda mAtradoLu rakta mAMsadoLidda |
A asthitagatavAda ati pApavannu ||
mAyavanu mADi maharAya muktiya koDuva |
dAyavanu vAlmIki munirAya balla || 1 ||
matte ma eMdenalu horabidda pApagaLu |
otti oLa pogadaMte kavATavAgi ||
citta kAyagaLa pavitra mADuva pariya |
Baktavara hanumaMtanobba tA balla || 2 ||
dhareyoLI nAmakke sarimigilu illeMdu |
parama vEdagaLella pogaLutihavu ||
siriyarasa SrIpuraMdaraviThalana nAmavanu |
siri kASiyoLagippa Sivanu tA balla || 3 ||
Leave a Reply