Composer : Shri Purandara dasaru
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ || ಪ ||
ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮ || ಅ.ಪ ||
ರಾವಣನ ಮೂಲಬಲ ಕಂಡು ಕಪಿಸೇನೆ |
ಆವಾಗಲೇ ಬೆದರಿ ಓಡಿದವು ||
ಈವೇಳೆ ನರನಾಗಿ ಇರಬೇಡದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||
ಅವನಿಗೆ ಇವ ರಾಮ ಇವನಿಗೆ ಅವ ರಾಮ |
ಅವನಿಯೊಳು ಈಪರಿ ರೂಪವುಂಟೆ ||
ಲವಮಾತ್ರದಿ ಅಸುರ ದುರುಳರೆಲ್ಲರು |
ಅವರವರು ಹೊಡೆದಾಡಿ ಹತರಾಗಿ ಪೋದರು || ೨ ||
ಹನುಮದಾದಿ ಸಾಧು ಜನರು ಅಪ್ಪಿಕೊಂಡು |
ಕುಣಿಕುಣಿದಾಡಿದರು ಹರುಷದಿಂದ ||
ಕ್ಷಣದಲ್ಲಿ ಪುರಂದರವಿಠ್ಠಲರಾಯನು |
ಕೊನೆಗೊಡೆಯನು ತಾನು ಒಬ್ಬನಾಗಿ ನಿಂತ || ೩ ||
alli nODalu rAma illi nODalu rAma || pa ||
ellelli nODidarU alli rAma || a.pa ||
rAvaNana mUlabala kaMDu kapisEne |
AvAgalE bedari ODidavu ||
IvELe naranAgi irabEDadeMdeNisi
dEva rAmacaMdra jagavella tAnAda || 1 ||
avanige iva rAma ivanige ava rAma |
avaniyoLu Ipari rUpavuMTe ||
lavamAtradi asura duruLarellaru |
avaravaru hoDedADi hatarAgi pOdaru || 2 ||
hanumadAdi sAdhu janaru appikoMDu |
kuNikuNidADidaru haruShadiMda ||
kShaNadalli puraMdaraviThThalarAyanu |
konegoDeyanu tAnu obbanAgi niMta || 3 ||
Leave a Reply