Rama Rama Raghurama

Composer : Shri Prasannavenkata dasaru

By Smt.Shubhalakshmi Rao

ರಾಮ ರಾಮ ರಘುರಾಮಾ ಎನ್ನಿರೋ [ಪ್]
ಪಾಮರನಾದರೂ ನೇಮದಿ ಕರೆದರೆ |
ಶ್ರೀ ಮನೋಹರ ಪ್ರೇಮದಿ ಪೊರೆವಾ [ಅ]

ಶಬರಿ ಎಂಬ ಮುದುಕಿ ಈ ಶುಭ ನಾಮದಿ |
ನಭದಲಿ ಅಭಿಜಿತೆ ಎನಿಸಿಕೊಂಡಳು |
ವಿಭುದಜನಕೆ ಪ್ರಭಂಜನ ನಾಮಾ |
ಅಭಯವು ಸತತ ನಿರ್ಭಯ ನಿಶ್ಚಿತ [೧]

ಕಪಿ ಶಿರೋಮಣಿ ಜಪಿಸೆ ಈ ನಾಮಾ
ಅಪರೂಪ ಭಕುತನ ಪದವಿ ಪಡೆದ |
ಪಾಪ ಪ್ರಕೋಪಕೆ ಶಾಪದಿ ಬಳಲಿದ |
ತಾಪಸ ಮುನಿಸತಿ ಸ್ವರೂಪ ಪಡೆದಳು [೨]

ಎಷ್ಟು ಕಥೆ ಹೇಳಿ ವರ್ಣಿಸಲೀ ನಾಮಾ |
ಇಷ್ಟಾರ್ಥದಾಯಕ ರಘುಕುಲ ಸೋಮಾ |
ದೃಷ್ಟಿ ನೆಟ್ಟವಗೆ ಶ್ರೇಷ್ಠ ನಾಮಾ |
ಸೃಷ್ಟಿಶ ಶ್ರೀಪ್ರಸನ್ವೆಂಕಟನ ನಾಮಾ [೩]


rAma rAma raGurAmA ennirO [p]
pAmaranAdarU nEmadi karedare |
SrI manOhara prEmadi porevA [a]

Sabari eMba muduki I SuBa nAmadi |
naBadali aBijite enisikoMDaLu |
viBudajanake praBaMjana nAmA |
aBayavu satata nirBaya niScita [1]

kapi SirOmaNi japise I nAmA
aparUpa Bakutana padavi paDeda |
pApa prakOpake SApadi baLalida |
tApasa munisati svarUpa paDedaLu [2]

eShTu kathe hELi varNisalI nAmA |
iShTArthadAyaka raGukula sOmA |
dRuShTi neTTavage SrEShTha nAmA |
sRuShTiSa SrIprasanveMkaTana nAmA [3]

Leave a Reply

Your email address will not be published. Required fields are marked *

You might also like

error: Content is protected !!