Composer : Shri Vijayeendra Tirtharu
ಅಟ್ಟತಾಳ
ಪರಬೊಮ್ಮ ಹರಿಯು ತಾ ನರರೂಪವ ತಾಳಿದ
ನರನಾದ ದಶರಥನ ವರದೇಹದಲವತರಿಸಿ
ಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆ
ಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನ
ಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮ
ಪರಿತಂದು ವಿಘ್ನವನು ಪರಿಹರಿಸಿದ ಮುನಿವರನ
ಹರುಷದಿಂದ ಪರಮಾನಂದ ಶರಧಿಯ ಲೋಲಾಡಿಸಿದ
ಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ (೧)
ಮಠ್ಯ
ಈತನೆಂತು ಯಜ್ಞದ ವಿಘ್ನವ ಪರಿಹರಿಸುವ
ಪೋತ ಮಹಾದ್ಭುತರಂತಿಹ ರಕ್ಕಸರ
ವೀತ ಭಯನಾಗಿ ಕೊಲ್ಲುವುದೆಂತೊ
ಭೂತಳ ಕಚ್ಚರಿ ವಿಜಯೀಂದ್ರ ರಾಮನ ಚರಿತ (೨)
ರೂಪಕ
ಜನಕನೆಂಬ ಜನಪತಿಯ ಮನೆಗೆ ಹೋಗಿ
ಜಾನಕಿಯ ಮನಕೆ ಹರುಷವಪ್ಪಂತೆ
ಜನಪದ ಕೈವಾರಿಸುತ್ತಿರೆ ಮನಕೆ
ಅಣಕವಾಡಿ ಶಿವನಧನುವ ಮುರಿದ
ವಿಜಯೀಂದ್ರರಾಮ ಮನಕೆ ಹರುಷವಪ್ಪಂತೆ (೩)
ಝಂಪೆ
ಇವನರ್ಭಕನೆ ಇವನ ಮುನಿಗಳಾದವರೆಲ್ಲ ಮನದಿ
ಭಾವಿಸಿ ಕಾಣದೆಂಬುದರಿಯಾ ಎಲೆ ರಮಣಿ
ಭುವನ ಪಾವನ ನಾಮ ಸಿರಿ ವಿಜಯೀಂದ್ರರಾಮ
ಭಾವಿಸೆ ಮನದಿ (೪)
ತ್ರಿಪುಟ
ರಾಮ ಜಾನಕಿಯ ಮದುವೆಯಾಗಿ ಬರುವಾಗ ಪರಶು-
ರಾಮನಿದಿರಸಿ ಅವನ ಬಿಲ್ಲನೇರಿಸಿ ಮೆರೆದ
ರಾಮನಿದಿರಸಿ ಶ್ಯಾಮಲಾಂಗ ವಿಜಯೀಂದ್ರ
ರಾಮ ಬಾಲಕನೆ ಹೇಳಾ (೫)
ಅಟ್ಟ
ನೊಸಲಲಿ ಕಣ್ಣು ಪಡೆದವನ ಗೆಲಿದೆ
ಅಸುಳೆಯೆಂದು ಬೆಂಕೊಂಡು ಕಂದನ ಕಾಯ್ದೆ
ಕುಸುರಿಜವಕೊಂದೆ ಬಾಣದಿಂದ ನಿಮಿಷದಿ
ಅಸಮ ವಿಕ್ರಮ ವಿಜಯೀಂದ್ರರಾಮ ಜಗದೊಳು (೬)
ಏಕ
ಉರವಣಿಸಿ ಬಹ ತಾಟಕಿಯ ಮಹಾ
ಕರಗಳ ನಿಮಿಷದಿ ಕತ್ತರಿಸುಯೆಂದು
ಹಿರಿಯರು ಪೇಳಲಿದಿರು ಪೇಳದೆ ಅಸುರೆಯ
ಕರಗಳ ಕಡಿದ ವಿಜಯೀಂದ್ರರಾಮ
ಸರಸಿಜಾಸಾನ ವಿನುತ ಸಿರಿ ಮೂಲರಾಮ (೭)
ಜತೆ
ಲೋಕಾಭಿರಾಮ ಸದ್ಗುಣಧಾಮ
ಲೋಕೈಕಭೌಮ ವಿಜಯೀಂದ್ರರಾಮ (೮)
aTTatALa
parabomma hariyu tA nararUpava tALida
naranAda daSarathana varadEhadalavatarisi
sirirAmaneMba puNyanAmadiMda merevuttire
haruShadiMda lIlegaidu kareya baMda kauSikana
uru yaj~ja viGnavanu pariharisuvudakkAgi parabomma
paritaMdu viGnavanu pariharisida munivarana
haruShadiMda paramAnaMda Saradhiya lOlADisida
siri vijayIMdra nAma horeyalemma yAvAgalU (1)
maThya
ItaneMtu yaj~jada viGnava pariharisuva
pOta mahAdButaraMtiha rakkasara
vIta BayanAgi kolluvudeMto
BUtaLa kaccari vijayIMdra rAmana carita (2)
rUpaka
janakaneMba janapatiya manege hOgi
jAnakiya manake haruShavappaMte
janapada kaivArisuttire manake
aNakavADi Sivanadhanuva murida
vijayIMdrarAma manake haruShavappaMte (3)
JaMpe
ivanarBakane ivana munigaLAdavarella manadi
BAvisi kANadeMbudariyA ele ramaNi
Buvana pAvana nAma siri vijayIMdrarAma
BAvise manadi (4)
tripuTa
rAma jAnakiya maduveyAgi baruvAga paraSu-
rAmanidirasi avana billanErisi mereda
rAmanidirasi SyAmalAMga vijayIMdra
rAma bAlakane hELA (5)
aTTa
nosalali kaNNu paDedavana gelide
asuLeyeMdu beMkoMDu kaMdana kAyde
kusurijavakoMde bANadiMda nimiShadi
asama vikrama vijayIMdrarAma jagadoLu (6)
Eka
uravaNisi baha tATakiya mahA
karagaLa nimiShadi kattarisuyeMdu
hiriyaru pELalidiru pELade asureya
karagaLa kaDida vijayIMdrarAma
sarasijAsAna vinuta siri mUlarAma (7)
jate
lOkABirAma sadguNadhAma
lOkaikaBauma vijayIMdrarAma (8)
Leave a Reply