Composer : Shri Shyamasundara dasaru on Shri Satyadhyana Tirtharu
Shri Satyadhyana Tirtharu : 1872 – 1942
॥ आसेतोरातुषाराद्रेर्योदिशो जितवान् मुहुः।
सत्यध्यानगुरुः पातु यतीन्द्रैरपि पूजितः॥
ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |
ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |
Aradhana – Chaitra Shukla Ashtami
Vrundavana – Pandarapura
ಪಾಂಡುನಂದನರಂತೆ ತೋರುತಿಹರು
ಪಂಡಿತೋತ್ತಮ ಸತ್ಯಧ್ಯಾನ ತೀರಥರು [ಪ]
ನಿಜಜ್ಞಾನ ಚಿಹ್ನದಿ ವಿನಯಾದಿ ಸದ್ಗುಣದಿ
ದ್ವಿಜರಾಜ ಸತ್ಕುಲದಿ ಸುಜನ ಗಣದಿ |
ಕುಜನ ವರ್ಗವ ನೀಗಿ ವೃಜಿನ ವರ್ಜಿತರಾಗಿ
ಗಜವರದನಂಘ್ರಿಯುಗ ಭಜನ ತತ್ಪರರಾಗಿ [೧]
ಧರ್ಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ
ವರ ಸುಗೀತಾರ್ಥ ತತ್ವಜ್ಞರಾಗಿ
ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ
ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ [೨]
ಋಷಿ ವ್ಯಾಸರುಕ್ತಿಯಲಿ ನಿಶಿಹಗಲು ಮನವಿರಿಸಿ
ವಸುಧೆ ಸುರರಿಗೆ ಸಮ್ಮೋದಗೊಳಿಸಿ
ವಸುದೇವಸುತ ಶ್ಯಾಮಸುಂದರನ ವಶಗೊಳಿಸಿ
ದಶ ದಿಶದಿ ಜಯಭೇರಿ ಅಸಮರೆಂದ್- ಹೊಡಿಸುತಲಿ [೩]
pAMDunaMdanaraMte tOrutiharu
paMDitOttama satyadhyAna tIratharu [pa]
nijaj~jAna cihnadi vinayAdi sadguNadi
dvijarAja satkuladi sujana gaNadi |
kujana vargava nIgi vRujina varjitarAgi
gajavaradanaMGriyuga Bajana tatpararAgi [1]
dharma ballavarAgi guruBakti yutarAgi
vara sugItArtha tatvaj~jarAgi
dharaNi mEluLLa sukShEtra tattIrtha
carisutali karituraga paripAlisuvarAgi [2]
RuShi vyAsaruktiyali niSihagalu manavirisi
vasudhe surarige sammOdagoLisi
vasudEvasuta shyAmasuMdarana vaSagoLisi
daSa diSadi jayaBEri asamareMd- hoDisutali [3]
Leave a Reply