Kaaye Durgaambhruniye

Composer : Shri Shyamasundara dasaru

By Smt.Shubhalakshmi Rao

ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ |
ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ
ಕಾಯ ನಿಲಯೆ ವಿಧಿ ಕಾಯಜ ತಾಯೆ [ಪ]

ಮಾಕಮಲೆ ಶ್ರೀಕರಳೆ | ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀಕರುಣಿಸು ರತ್ನಾಕರನ ಮಗಳೆ (೧)

ಸೀತೆ ಸಾರಸ ನಯನೆ | ಶೀತಾಂಶುವಿನ ಭಗಿನಿ
ಮಾತೆ ನಮಿಪೆ ತವ | ಘಾತಕ ವ್ರಾತದ
ಭೀತಿಯ ತೋರದೆ | ಪ್ರೀತಿಯಿಂದೊಲಿದು (೨)

ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ
ಈಕ್ಷಣ ಕರುಣ ಕಟಾಕ್ಷದಿಂದೀಕ್ಷಿಸು
ಪೇಕ್ಷವ ಮಾಡದೆ ಮೋಕ್ಷದಾಯಕಳೆ (೩)

ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ
ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ
ಕುಟಿಲರಹಿತೆ ಶತ | ತಟಸ್ಥ ಸನ್ನಿಭಳೆ (೪)

ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು
ಕ್ಷೇಮಗರೆದು ಮಮಧಾಮದಿ ನೆಲಸೆ (೫)


kAye durgAMBraNiye | kAye SrI rukmiNiye |
kAye kAye SuBa kAye dayadi hari
kAya nilaye vidhi kAyaja tAye [pa]

mAkamale SrIkaraLe | pOtana nuDi kELe
BIkaraLenisuta | vyAkulagoLisade
nIkaruNisu ratnAkarana magaLe (1)

sIte sArasa nayane | SItAMSuvina Bagini
mAte namipe tava | GAtaka vrAtada
BItiya tOrade | prItiyiMdolidu (2)

lakShmikRuti SAMti akSharaLe jayavaMti
IkShaNa karuNa kaTAkShadiMdIkShisu
pEkShava mADade mOkShadAyakaLe (3)

vaTadeleyoLu malagiruva | vaTurUpi patipadava
paThisutabjasIkara | puTadi namisuvaMtha
kuTilarahite Sata | taTastha sanniBaLe (4)

BAme SrI BUsuteye | SAmasuMdara satiye
nA more hokkenu | prEmadiMdali |su
kShEmagaredu mamadhAmadi nelase (5)

Leave a Reply

Your email address will not be published. Required fields are marked *

You might also like

error: Content is protected !!