Composer : Shri Shyamasundara dasaru on Yantroddharaka Hanuma
ಹನುಮಂತ ಪಾಹಿ ಹನುಮಂತ |
ಮುನಿವ್ಯಾಸ ಕರಕಮಲಾರ್ಚಿತ ಜಯವಂತ || ಪ| |
ಭೂಲೋಲ ಕೋಲಜಕೂಲ ಸುಮಂದಿರ |
ಫಾಲಾಕ್ಷ ಪೌಲೋಮಿಪತಿ ವಂದಿತ |
ಕಾಲಕಾಲದಿ ನಿನ್ನ ಓಲೈಸುವರ ಸಂಗ |
ಪಾಲಿಸು ಕರುಣದಿ ಕಾಳೀ ಮನೋಹರ || ೧ ||
ಬಾಣ ರೂಪನೆ ಪಂಚಬಾಣ ನಿರ್ಜಿತನೆ | ಷ |
ಟ್ಕೋಣ ಮಧ್ಯದಿ ಬಂದು ನೀ ನೆಲೆಸಿ |
ಕ್ಷೋಣೀಗೀರ್ವಾಣ ಸುಶ್ರೇಣಿಯಿಂದರ್ಚನೆ |
ಮಾಣದೆ ಕೈಕೊಂಬ ವಾಣೀಶ ಸ್ಥಾನಾರ್ಹ || ೨||
ಸಿಂಧು ಬಂಧನ ಶ್ಯಾಮಸುಂದರವಿಠ್ಠಲನ |
ದ್ವಂದ್ವ ಪಾದಾರವಿಂದಕೆ ಮಧುಪ |
ನೆಂದೆನಿಸಿದ ಗುರು ಗಂಧವಾಹನ | ನಿನ |
ಗೊಂದಿಸುವೆನು ಭವಬಂಧನ ಬಿಡಿಸಿ ಕಾಯೋ || ೩ ||
hanumaMta pAhi hanumaMta |
munivyAsa karakamalArcita jayavaMta || pa| |
BUlOla kOlajakUla sumaMdira |
PAlAkSha paulOmipati vaMdita |
kAlakAladi ninna Olaisuvara saMga |
pAlisu karuNadi kALI manOhara || 1 ||
bANa rUpane paMcabANa nirjitane | Sha |
TkONa madhyadi baMdu nI nelesi |
kShONIgIrvANa suSrENiyiMdarcane |
mANade kaikoMba vANISa sthAnArha || 2||
siMdhu baMdhana SyAmasuMdaraviThThalana |
dvaMdva pAdAraviMdake madhupa |
neMdenisida guru gaMdhavAhana | nina |
goMdisuvenu BavabaMdhana biDisi kAyO || 3 ||
Leave a Reply