Composer : Shri Shyamasundara dasaru
ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ [ಪ]
ಕಾಲಕಾಲಕೆ ಕಮಲಾಲಯೆ ಗೋಪಿಯ
ಬಾಲನಾಳುಗಳ ಊಳಿಗವಿತ್ತು [ಅ.ಪ]
ಜಾನಕಿ ಶುಭಗಾತ್ರೆ ನಮಿಸುವೆ |
ಮಾನಿತೆ ಚರಿತ್ರೆ |
ಸಾನುರಾಗದಿ ತವ ಸೂನುವೆನಿಪ ಪವ
ಮಾನ ಸುಶಾಸ್ತ್ರದ ಜ್ಞಾನವಿತ್ತು ಸದಾ [೧]
ಶಂಭು ದೃಹಿಣಿ ವಿನುತೆ ತ್ರೈಜಗ
ದಂಬೆ ಸುಗುಣ ಭರಿತೆ |
ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ
ಯಾಂಬುಜದೊಳಿಹ ಬಿಂಬನ ತೋರಿ [೨]
ಪ್ರೇಮದಿಂದ ನೋಡೆ ಮನ್ಮನ |
ಧಾಮದಿ ನಲಿದಾಡಿ |
ಕಾಮಿನಿಮಣೀ ಗಜಗಾಮಿನಿ ಗೋಮಿನಿ
ಶಾಮಸುಂದರನ ವಾಮಾಂಗಿಯೆ ಸದಾ [೩]
pAlisenna mAte karuNadi pAlAMbudhi jAte [pa]
kAlakAlake kamalAlaye gOpiya
bAlanALugaLa ULigavittu [a.pa]
jAnaki SuBagAtre namisuve |
mAnite caritre |
sAnurAgadi tava sUnuvenipa pava
mAna suSAstrada j~jAnavittu sadA [1]
SaMBu dRuhiNi vinute traijaga
daMbe suguNa Barite |
kuMBiNi sute durgAMBraNi mamahRuda
yAMbujadoLiha biMbana tOri [2]
prEmadiMda nODe manmana |
dhAmadi nalidADi |
kAminimaNI gajagAmini gOmini
SAmasuMdarana vAmAMgiye sadA [3]
Leave a Reply