Kayo Jitamitra

Composer : Shri Shyamasundara dasaru

By Smt.Shubhalakshmi Rao

ಕಾಯೋ ಜಿತಾಮಿತ್ರ | ಯತಿಕುಲ ನಾಯಕ ಸುಚರಿತ್ರ ||ಪ||
ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ ||ಅ.ಪ||

ಅಭಯದಾತನೆಂದು ತ್ವತ್ಪದ |
ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ (೧)

ಮೌನಿ ಕುಲಾಧೀಶ |
ಪ್ರಾರ್ಥಿಪೆ ಭಾನುಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು (೨)

ತುಂಗಮಹಿಮ ಭರಿತ | ಕುಮತ
ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು (೩)

ಮರುತ ಸುಮತ ಶರಧಿ | ಸುಧಾರಕ |
ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರೆಯದೆ ನಿರುತ (೪)

ಕಂದುಗೊರಳ ವಿನುತ |
ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳೆವ ರಘು
ನಂದನ ಮುನಿಮನ ಮಂದಿರವಾಸ (೫)


kAyO jitAmitra | yatikula nAyaka sucaritra ||pa||
kAyo kAyo jitakAyajAta Sita
kAyo ninna pada tOyajakeraguve ||a.pa||

aBayadAtaneMdu tvatpada |
kaBinamisuve baMdu
kuBava kudhara pavi SuBa guNanidhi guru |
viBudEMdrakara abuja saMBUta (1)

mauni kulAdhISa |
prArthipe BAnuprakASa
dInaja nAmakara dhEnu purAtana
gOnada taru nija tANagaida guru (2)

tuMgamahima Barita | kumata
dvijaMgama dvijanAtha
maMgaLa kRuShNa taraMgiNi BImA
saMgamadali sale | kaMgoLisuva guru (3)

maruta sumata Saradhi | sudhAraka |
durita kadaLidviradi
dharaNi divija parivAra namita nija
karuNi naMbidenu mareyade niruta (4)

kaMdugoraLa vinuta |
SAmasuMdarAMGri dUta
poMdida janaraGa vRuMda kaLeva raGu
naMdana munimana maMdiravAsa (5)

Leave a Reply

Your email address will not be published. Required fields are marked *

You might also like

error: Content is protected !!