Composer : Shri Abhinavapranesha dasaru on Shyamasundara dasaru
ತೆರಳಿದರು ತೆರಳಿದರು ಹರಿಯ ಪುರಕೆ |
ಪುರ ಬಲ್ಲಟಗಿಯ ವರಕವಿ ಶ್ಯಾಮಸುಂದರರು || ಪ ||
ವೀರ ವೈಷ್ಣವರಲ್ಲಿ ಜನಿಸುತಲಿ ಮಾನವಿಯ |
ಧಾರುಣಿಪ ದಾಸರ ಒಲುಮೆ ಪಡೆದು |
ಈರ ಮತ ತತ್ತ್ವಗಳ | ಪಾರ ಮಹಿಮೆಗಳ
ಚಾರು ಪದ ಪದ್ಯದಿಂ |ಸಾರಿ ನಲಿದವರು |೧|
ಮೂಕ ಬಧಿರರ ತೆರದಿ |ಲೋಕಕ್ಕೆ ತೋರುತಲಿ |
ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ
ಈ ಕುಂಭಿಣಿಯೊಳು | ಸಾಕೆಂದು ತ್ವರಿತದಲಿ |
ಕಾಕೋದರಾಗ್ರಾಜನ ನಾಮ ಘರ್ಜನೆಗೈದು |೨|
ದುರ್ಮುಖ ಸಂವತ್ಸರದಿ | ವೃಷ
ಭ ಮಾಸದ | ಶುಕ್ಲ ಮೂರು ತಿಥಿ
ಶುಕ್ರವಾರ ಹಗಲು |ನಿರ್ಮಲಾನಂದದಿ
ಲಯವನ್ನು ಚಿಂತಿಸುತ |ಭರ್ಮಪಿತ
ಅಭಿನವ ಪ್ರಾಣೇಶವಿಠಲನ್ನ ನೆನೆಯುತ |೩|
teraLidaru teraLidaru hariya purake |
pura ballaTagiya varakavi SyAmasuMdararu || pa ||
vIra vaiShNavaralli janisutali mAnaviya |
dhAruNipa dAsara olume paDedu |
Ira mata tattvagaLa | pAra mahimegaLa
cAru pada padyadiM |sAri nalidavaru |1|
mUka badhirara teradi |lOkakke tOrutali |
kAku vruttigaLanu nUki meTTi
I kuMBiNiyoLu | sAkeMdu tvaritadali |
kAkOdarAgrAjana nAma Garjanegaidu |2|
durmuKa saMvatsaradi | vRuSha
Ba mAsada | Sukla mUru tithi
SukravAra hagalu |nirmalAnaMdadi
layavannu ciMtisuta |Barmapita
aBinava prANESaviThalanna neneyuta |3|
Leave a Reply