Composer : Shri Modalkal Sheshadasaru
ಫಾಲಲಿಪಿ ಪರಿಹರಿಸಿಕೊಂಬರುಂಟೆ |
ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ |ಪ|
ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲು
ವಿಶಾಲ ಪರ್ನದ್ದಾದರಿರಬಾರದೆ |
ಆಳುಗಳು ಬಹುಮಂದಿ ಇದ್ದವಗೆ ನುಡಿದ
ಮಾತಾಲಿಸುವ ನರನೊಬ್ಬನಿರಬಾರದೆ |೧|
ಜ್ಞಾನದಲಿ ಹರಿರೂಪ ಬಹಿರಂತರದಿ ನೋಳ್ಪ
ಆನಂದದಲಿ ಸತತ ಇದ್ದವಗೆ |
ಧ್ಯಾನದಲಿ ಕ್ಷಣಮಪಿ ಕುರುಹು ಕಾಣಿಸಿಕೊಂಬ
ದೀನ ಮನವಾದರೂ ಇರಬಾರದೆ |೨|
ಕೋಟಿ ದ್ರವ್ಯವು ಇದ್ದು ನೀಟ ಕವಡಿಲ್ಲದೆ
ಕಾಟ ಕಾಣದೆ ಸೊರಗಿ ಮರುಗಿದಂತೆ |
ಹಾಟಕಾಂಬರಧರ ಗುರು ವಿಜಯವಿಠ್ಠಲರೇಯ
ದಾಟುವರಿಲ್ಲ ನಿನ್ನ ಪ್ರಬಲ ಶಾಸನವ |೩|
PAlalipi pariharisikoMbaruMTe |
kAlanAmaka ninna klaptadali baredidda |pa|
sAlu sPaTikada ratnamayavAda mane iralu
viSAla parnaddAdarirabArade |
ALugaLu bahumaMdi iddavage nuDida
mAtAlisuva naranobbanirabArade |1|
j~jAnadali harirUpa bahiraMtaradi nOLpa
AnaMdadali satata iddavage |
dhyAnadali kShaNamapi kuruhu kANisikoMba
dIna manavAdarU irabArade |2|
kOTi dravyavu iddu nITa kavaDillade
kATa kANade soragi marugidaMte |
hATakAMbaradhara guru vijayaviThThalarEya
dATuvarilla ninna prabala SAsanava |3|
Leave a Reply