Composer : Shri Modalkal Sheshadasaru on Shri Vijayadasaru
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊ
ಹೊರತಾದ ಕಾರಣದಿ ಹೀನನಾದೆ ||ಪ||
ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವ
ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||
ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರ
ಆರ್ತಗಳ ಪರಿಹರಿಸಿ ಸರ್ವಾರ್ಥಗರೆವ (೧)
ಸುರವಂಶಕೆ ಮುಖ್ಯ ಗುರುವೆನಿಸಿ ಮೆರೆದೆ
ಮರುತ ದೇವನ ದಯಕೆ ಪಾತ್ರನಾಗಿ ||
ಹರಿಯ ಆನಂದಾಖ್ಯ ಶರಧಿ ಮುಣುಗಿದ
ಮಹಾ ಪರಮ ಕರುಣಾ ನಿಧಿಯ ದೇವ ಮಣಿಯೆ (೨)
ನೀ ಪ್ರಸನ್ನನಾಗೆ ಸಕಲ ವೈಭವದಿಂದ
ಪ್ರಪೂಜ್ಯರೆನಿಸುವರು ಅಮರ ತತಿಯು ||
ನೀ ಪರಾಂಙ್ಮಖನಾಗೆ ಜ್ಞಾನ ಬಲ
ಸಂಪದವು ಲೋಪ ಐದುವರಯ್ಯ ಸರ್ವ ನಿರ್ಜನರು (೩)
ಆವಾವ ಕಾಲದಲಿ ನಿನ್ನ ದಯದಿಂದಲ್ಲಿ
ದೇವಾರ್ತಿಗಳನೈದು ಸೌಖ್ಯ ಬಡುವೆ ||
ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆ
ಸಾವಧಾನದಲೆನ್ನ ಸಲಹಬೇಕು (೪)
ಬಾಲಕನ ಅಪರಾಧ ಅನಂತವಿರಲಿನ್ನು
ಪಾಲಿಸ ಬೇಕಯ್ಯ ನೈಜಗುರುವೆ ||
ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯ
ಕಾಲಕಾಲಕೆ ಅಗಲದಂತೆ ವರವೀಯೋ (೫)
guruve nimmaya karuNa vRukSha neLalo
horatAda kAraNadi hInanAde ||pa||
traitiyali tArAKya dvAparadi uddhava
KyAti drONanu kaliyugadi nAnA ||
BautikagaLa dharisi prArthisida sajjanara
ArtagaLa pariharisi sarvArthagareva (1)
suravaMSake muKya guruvenisi merede
maruta dEvana dayake pAtranAgi ||
hariya AnaMdAKya Saradhi muNugida
mahA parama karuNA nidhiya dEva maNiye (2)
nI prasannanAge sakala vaiBavadiMda
prapUjyarenisuvaru amara tatiyu ||
nI parAM~gmaKanAge j~jAna bala
saMpadavu lOpa aiduvarayya sarva nirjanaru (3)
AvAva kAladali ninna dayadiMdalli
dEvArtigaLanaidu sauKya baDuve ||
kAva karuNeye enna avaguNagaLeNisadale
sAvadhAnadalenna salahabEku (4)
bAlakana aparAdha anaMtaviralinnu
pAlisa bEkayya naijaguruve ||
pAlasAgaraSAyi guru vijaya viThThalarEya
kAlakAlake agaladaMte varavIyO (5)
Leave a Reply