Composer : Shri Vyasavittala [ankita pradana to Venugopala dasaru]
ಕರೆದು ಕೈ ಪಿಡಿಯೊ ಎನ್ನ
ವೇಣುದಾಸ ದೊರೆಯೆ ಪತಿತ ಪಾವನ್ನ ||ಪ||
ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನ
ಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ||ಅ.ಪ||
ವಿಜಯರಾಯರ ಪಾದವ ಆದರದಿಂದ ಭಜಿಸಿ
ಸಂತತ ಮೋದವಾ
ನಿಜವಾಗಿ ಹೃದಯ ಪಂಕಜದೊಳಾಗಲು
ಭವ ವ್ರಜದೊಳು ಮುಣಗಿಪ್ಪ
ಸುಜನ ಶಿರೋಮಣಿ ತ್ರಿಜಗ ವಂದಿತ
ಗಜವರದ ಪಂ-ಕಜಪಿತ
ಪಿನಾಕ ಜನರ ಕೂಡಾ
ಸಹಜ ಭಕುತಿಯಲಿ ಯಜಿಸಿ ಮೋಹವೃಜನ
ದಾಟಿ ದ್ವಿಜವರಾಗ್ರಣಿ ||೧||
ಸಂತರ ಸಲಹುವನೇ ಸಂಗಡಲೇ
ನಿಶ್ಚಿಂತರ ಮಾಡುವುದೇ
ಎಂತು ಪೇಳಲು ಎನಗಂತು ತೋರದು
ದುಷ್ಟ ಭ್ರಾಂತಿಯಿಂದಲಿ ಮಾಳ್ಪ
ಕಂತುಗಳಿಗೆ ಲೇಶ ಅಂತ ಕಾಲಕ್ಕೆ
ಚಿಂತಾ ಕಾಲಯಾ ಪಂಥ ಸಾರುವದಿಂತು
ಸರಿ ಜಗದಂತು ರಂಗನ ಮುಂತು
ತಿಳಿವ-ದೆಂತುಪಾಯವು ಶಾಂತದಾತನೆ ||೨||
ಅರಿದೇನು ಆಪ್ತ ಬಂಧು ಪಾಮರನ
ಉದ್ಧರಿಪುದು ನಿನಗೆ ಇಂದು
ಸರಿಸಾ ದೂರದಿ ನಿನ್ನ ಸ್ಮರಣೆ
ಮಾಡುವೆ ಆಲ್ಪರಿದು ಬಾಯಿ ಬಿಡುವೆನೊ
ಮರೆಯಲಾಗದು ತಂದೆ ದುರುಳ
ವಿಷಯಕ್ಕೆರಗುವ ಅಂತಃ-ಕರುಣ ನಿಲಿಸಿ
ಪೊರೆವ ಭಾರವು ನಿರುತ ನಿನ್ನದು
ವ್ಯಾಸವಿಠಲನ ಭರದಿ ಪೊಗಳುವ
ಪರಮ ಧನ್ಯಾನೆ ||೩||
karedu kai piDiyo enna
vENudAsa doreye patita pAvanna ||pa||
karedu kai piDiyo nI karabiDade ninna
caraNave gatiyeMdu mare bidda manujanna ||a.pa||
vijayarAyara pAdava AdaradiMda Bajisi
saMtata mOdavA
nijavAgi hRudaya paMkajadoLAgalu
Bava vrajadoLu muNagippa
sujana SirOmaNi trijaga vaMdita
gajavarada paM-kajapita
pinAka janara kUDA
sahaja Bakutiyali yajisi mOhavRujana
dATi dvijavarAgraNi ||1||
saMtara salahuvanE saMgaDalE
niSciMtara mADuvudE
eMtu pELalu enagaMtu tOradu
duShTa BrAMtiyiMdali mALpa
kaMtugaLige lESa aMta kAlakke
ciMtA kAlayA paMtha sAruvadiMtu
sari jagadaMtu raMgana muMtu
tiLiva-deMtupAyavu SAMtadAtane ||2||
aridEnu Apta baMdhu pAmarana
uddharipudu ninage iMdu
sarisA dUradi ninna smaraNe
mADuve Alparidu bAyi biDuveno
mareyalAgadu taMde duruLa
viShayakkeraguva aMtaH-karuNa nilisi
poreva BAravu niruta ninnadu
vyAsaviThalana Baradi pogaLuva
parama dhanyAne ||3||
Leave a Reply