Composer : Shri Vijayaramachandra vittala dasaru
ಇಂದಿರೆ ಚಂದಿರವದನೆ ಮಂದಗಮನೆ
ಕಂದರ್ಪ ಕೋಟಿ ಲಾವಣ್ಯೆ [ಪ]
ಮಂದನಾಗಿ ಭವಸಿಂಧುವಿಲಿ ಪೊಂದಿದೆ
ಬಂದು ನೀ ಕರಪಿಡಿದು ಮುಂದಕೆ ಕರೆಯೆ [ಅ.ಪ.]
ನಾಗವೇಣಿಯೆ ಸುರಶ್ರೇಣಿ ಅಗಣಿತ ಗುಣ ಮಣಿಯ
ಹೊಗಳುವ ಮತಿ ನೀಡೆ ಕಲ್ಯಾಣಿ
ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು
ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನವ ಪಾಲಿಸೆ (೧)
ಸರಸಿಜೋದ್ಭವ ಮಾತೆ ವಿಖ್ಯಾತೆ
ಸುರ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ
ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು
ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ (೨)
ಹರಿಗುಣ ಮಣಿಯೆಣಿಸುವ ಧೀರೆ
ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ
ಅರಿದೂರ ವಿಜಯ ರಾಮಚಂದಿರವಿಠಲನ
ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ (೩)
iMdire caMdiravadane maMdagamane
kaMdarpa kOTi lAvaNye [pa]
maMdanAgi BavasiMdhuvili poMdide
baMdu nI karapiDidu muMdake kareye [a.pa.]
nAgavENiye suraSrENi agaNita guNa maNiya
hogaLuva mati nIDe kalyANi
hagaliruLu naDeyuva bage bage kriyegaLu
nagadharane mALpAneMba mige j~jAnava pAlise (1)
sarasijOdBava mAte viKyAte
sura nikara sannute kaMkaNABaraNa BUShite
kare karegoLisuva ahaM mamate Saradhiyu
tereyaMte baruvudu maresi nI poreye (2)
hariguNa maNiyeNisuva dhIre
paripari alaMkAre smarisadavarige dUre
aridUra vijaya rAmacaMdiraviThalana
niruta dhEnisuvaMte mareyade mADe tAye (3)
Leave a Reply