Composer : Shri Vijayaramachandra vittala dasaru
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ||ಪ||
ಹಮ್ಮಿನ ಅರಿಷಡ್ವರ್ಗ ಬಿಡದೆ
ಅಧರ್ಮರ ಸೇವೆ ಮಾಡಿ
ಘಮ್ಮನೆ ಕಾಲ ಕಳೆವ
ಪಾಮರ ಮನುಜನ ||ಅ.ಪ||
ಹರಿದಿನದುಪವಾಸ ಮರುದಿನ ಪಾರಣೆ
ಸರಿಯಾಗಿ ಮಾಡಿದೆನೆ
ಕೊರಳಲ್ಲಿ ತುಳಸೀ ಸರಗಳ ಧರಿಸಿ
ಹರಿಗೆ ಮೈಮರೆದಾನೊಂದಿಸಿದೆನೆ (೧)
ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ
ಕ್ಷೇತ್ರಗಳ ಬಳಸಿ
ಕ್ಷೇತ್ರಜ್ಞನಾ ಪಾದ ನೇತ್ರದಿಂದ ನೋಡಿ
ಕೃತಾರ್ಥ ನಾನಾದೆನೆ (೨)
ವರ ನಾರೇರ ಕಂಡು ನರಕ ಭಯವಿಲ್ಲದೆ
ಕರೆದು ಮನ್ನಿಸುವ
ವರ ಗಾಯತ್ರಿ ಮೊದಲಾದ ಪರಿಪರಿ
ಮಂತ್ರಗಳು ನಿರುತ ನಾ ಜಪಿಸುವೆನೆ (೩)
ಕಾಲಿಗೆ ಗೆಜ್ಜೆ ಕಟ್ಟಿ ಶಿರಿಲೋಲನ ಮುಂದೆ
ಲಲಿತದಿಂ ಕುಣಿಯುವೆನೆ
ತಾಳ ಮ್ಯಾಳಾದಿಂದ ನೀಲ ಮೇಘ ಶ್ಯಾಮನ
ಬಾಲಲೀಲೆ ಪಾಡಿ ಲೋಲನಾಗುವೆನೆ (೪)
ಕಂದರ್ಪ ಪಿತನಾದ ವಿಜಯ ರಾಮಚಂದ್ರ
ವಿಠಲನ್ನ ಮಂದಹಾಸ ಮುಖವನ್ನು
ಒಂದಿನವಾದರು ನೋಡ್ಯಾನಂದಪಟ್ಟು
ಮಂದ ಜ್ಞಾನ ತೊರೆದೆನೆ (೫)
summane haridAsareMbire emmanellA ||pa||
hammina ariShaDvarga biDade
adharmara sEve mADi
Gammane kAla kaLeva
pAmara manujana ||a.pa||
haridinadupavAsa marudina pAraNe
sariyAgi mADidene
koraLalli tuLasI saragaLa dharisi
harige maimaredAnoMdisidene (1)
pAtrara kUDa yAtre mADi puNya
kShEtragaLa baLasi
kShEtraj~janA pAda nEtradiMda nODi
kRutArtha nAnAdene (2)
vara nArEra kaMDu naraka Bayavillade
karedu mannisuva
vara gAyatri modalAda paripari
maMtragaLu niruta nA japisuvene (3)
kAlige gejje kaTTi SirilOlana muMde
lalitadiM kuNiyuvene
tALa myALAdiMda nIla mEGa SyAmana
bAlalIle pADi lOlanAguvene (4)
kaMdarpa pitanAda vijaya rAmacaMdra
viThalanna maMdahAsa muKavannu
oMdinavAdaru nODyAnaMdapaTTu
maMda j~jAna toredene (5)
Leave a Reply