Composer : Shri Pranesha dasaru
Sri Subodhendra Tirtharu: 1799 – 1807
Aradhana Tithi : Chaitra Bahula tritiya
Vrindavana : Nanjangud
ಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |
ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||
सुधासेव समद्भूत सुखसंवित्समाश्रयं ।
सुजनाभीष्टदातारं सुभोदेंद्रगुरुं भजे ॥
ಅಭಯವೀಗಲೇ ಬೇಡೆ | ಗುರು | ಸುಬೋಧೇಂದ್ರಾರ್ಯರ
ನೋಡೆ ಸಖಿ ||ಪ||
ಪಾಪ ಕಳೆವಳಾಕಾಶ – ಗಂಗೆ | ಬಹು |
ತಾಪ ಕಳೆವ ದ್ವಿಜನಾಥ |
ಆಪಾದಪ ದೈನ್ಯ – ಹರೀ ಸುಗುಣವು |
ಈ ಪುರುಷರಿಗೊಪ್ಪು- ವದಲ್ಲೇ ಸಖಿ ||೧||
ಮೀನಾ ಕೂರ್ಮ ದ್ವಿಜ ನೋಡಿ ಸ್ಮರಿಸಿ ಮುಟ್ಟಿ |
ಸೂನುಗಳನು ಸಲಹುವ ತೆರದಿ |
ಸುನೋಟದಿ ನೆನೆದು ಪಾದಸ್ಪರ್ಶ | ವಿ |
ತ್ತಾನತರನು ಪೋರೆವರು ಬಿಡದೆ ಸಖಿ ||೨||
ಈ ಸಂಯಮಿಗಳ ಕೃಪೆಯೊಂದಿರುತಿರೆ |
ಏಸು ಸಾಧನ ಇನ್ನೇತಕೆಲೆ |
ನಾಶರಹಿತ ವೈಕುಂಠವೇ ಸರಿ | ಪ್ರಾ |
ಣೇಶವಿಠ್ಠಲ ನಿವರಲ್ಲಿಹದಕೆ ||೩||
aBayavIgalE bEDe | guru | subOdhEMdrAryara
nODe saKi ||pa||
pApa kaLevaLAkASa – gaMge | bahu |
tApa kaLeva dvijanAtha |
ApAdapa dainya – harI suguNavu |
I puruSharigoppu- vadallE saKi ||1||
mInA kUrma dvija nODi smarisi muTTi |
sUnugaLanu salahuva teradi |
sunOTadi nenedu pAdasparSa | vi |
ttAnataranu pOrevaru biDade saKi ||2||
I saMyamigaLa kRupeyoMdirutire |
Esu sAdhana innEtakele |
nASarahita vaikuMThavE sari | prA |
NESaviThThala nivarallihadake ||3||
Leave a Reply