Nodi nodi Satyapriyara

Composer : Shri Vijayadasaru

By Smt.Shubhalakshmi Rao

Sri Satyapriya Tirtharu – 1737 – 1744
ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |
ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |
श्रीसत्यविजयांबोधेर्जातं सत्यप्रियामृतम् ।
जरामृती जंघनीतु विबुधानां मुदे सदा ।
Aradhana – Chaitra Shudda Trayodashi
Vrundavana – Manamadurai,TN


ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು
ಪಾಡಿ ಪಾಡಿ ಯೋಗಿವರ್ಯರ ನಾ
ಪಾಡ ಪಂಥದಲಿ ಬಂದ ಮೂಢ ಮಿಥ್ಯಾ ವಾದಿಗಳ
ಓಡಿಸಿ ತನ್ನನು ಕೊಂ
ಡಾಡಿದವರ ಪೊರೆವ ಯತಿಯ ||ಪ||

ನಾಗಸರ ನಾಗ ಬಂಧ ಕೊಂಬು ಕೊಳಲು
ರಾಗದಿಂದ ಪಾಡುವ ಸನಾಯಿಸುತಿಗಳು
ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು
ಸ್ಯಾಗರ ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ ||೧||

ವಾದಿಗಳೆದೆಯು ಬಿರಿಯೆ ಧವಳ ಶಂಖದಾ
ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ
ವೇದ ಓದುವ ಶಿಷ್ಯರು ಮೇದಿನಿ ಸುರರು
ಬಲದಾರಿಯಲಿ ಬರೆ ಆಶೀ
ರ್ವಾದವನ್ನು ಕೊಡುವ ಧೀರನು ||೨||

ವಾಜಿ ಗಜ ಪಾಯಿದಳನೇಕ ಸಂದಣಿ
ಯೋಜನದಗಲಕೆ ಘೋಷಣವಾಗಲು
ರಾಜಾಧಿ ರಾಜರು ಪೂಜೆಯನ್ನು ಮಾಡುತಿರೆ
ಈ ಜಗದೊಳಗೆ ಸಿದ್ಧ ತೇಜ ಪುಂಜರನ್ನ ||೩||

ಬುದ್ಧಿ ಹೀನನಾದ ಜನರ ಉದ್ಧರಿಸುತ
ಅದ್ವೈತ ಮತ ಶಾಸ್ತ್ರ ವದ್ದು ಕಳವುತ
ಮಧ್ವ ಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ
ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ ||೪||

ಚಂಡ ಮಾಯ ವಾದಿಗಳ ಹಿಂಡು ಬರಲಾಗಿ
ಕಂಡು ಹರುಷದಿಂದ ಸಭಾ ಮಂಡಿತರಾಗಿ
ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ
ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ ||೫||

ಬಿಜವಾಡದಲಿ ಕೃಷ್ಣ ತಜ್ಜಲದೊಳು
ದುರ್ಜಂತುಗಳು ನರರಾ ಬೆಚ್ಚರಿಸಲು
ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ
ರಾಜ ಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ ||೬||

ದೇಶದೊಳೀ ಶೇಷವಾದ ದಾಸರ ಪ್ರಿಯ
ವಾಸ ಸಿರಿ ವಿಜಯವಿಠ್ಠಲೇಶನಂಘ್ರಿಯ
ಸಾಸಿರ ದಳದ ಧ್ಯಾನ ಮೀಸಲಾಗಿ ಮಾಡುತಿಪ್ಪ
ದೋಷರಹಿತರಾದ ಸಂನ್ಯಾಸ ಕುಲ ಭೂಷಣನಾ ||೭||


nODi nODi satyapriyara nA niMdu niMdu
pADi pADi yOgivaryara nA
pADa paMthadali baMda mUDha mithyA vAdigaLa
ODisi tannanu koM
DADidavara poreva yatiya ||pa||

nAgasara nAga baMdha koMbu koLalu
rAgadiMda pADuva sanAyisutigaLu
bEgi kUguva heggALe duMduBi esiye catu
syAgara pariyaMta mereda yOgigaLAgraNyana ||1||

vAdigaLedeyu biriye dhavaLa SaMKadA
nAda opppisutti mereva biridu samudAya
vEda Oduva SiShyaru mEdini suraru
baladAriyali bare ASI
rvAdavannu koDuva dhIranu ||2||

vAji gaja pAyidaLanEka saMdaNi
yOjanadagalake GOShaNavAgalu
rAjAdhi rAjaru pUjeyannu mADutire
I jagadoLage siddha tEja puMjaranna ||3||

buddhi hInanAda janara uddharisuta
advaita mata SAstra vaddu kaLavuta
madhva matava eMbo sudhAbdhige rAkEMdunaMte
iddu BavarOgaLige maddu ahudO suguNadavara ||4||

caMDa mAya vAdigaLa hiMDu baralAgi
kaMDu haruShadiMda saBA maMDitarAgi
KaMDa tuMDu mADi avara diMDugeDahi maMDalake
puMDarikAkShane uddaMDaneMdu sAridarana ||5||

bijavADadali kRuShNa tajjaladoLu
durjaMtugaLu nararA beccarisalu
prajvalisuta pOgi mArjane yannu gaidu BIta
rAja Jarava biDisi kAyida sajjanara manOhara ||6||

dESadoLI SEShavAda dAsara priya
vAsa siri vijayaviThThalESanaMGriya
sAsira daLada dhyAna mIsalAgi mADutippa
dOSharahitarAda saMnyAsa kula BUShaNanA ||7||

Leave a Reply

Your email address will not be published. Required fields are marked *

You might also like

error: Content is protected !!