Composer : Shri Gurugovinda dasaru
Sri Satyapriya Tirtharu – 1737 – 1744
ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |
ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |
श्रीसत्यविजयांबोधेर्जातं सत्यप्रियामृतम् ।
जरामृती जंघनीतु विबुधानां मुदे सदा ।
Aradhana – Chaitra Shudda Trayodashi
Vrundavana – Manamadurai,TN
ವೃಂದಾವನ ನೋಡಿದೆ | ಸತ್ಯ ಪ್ರೀಯರ
ವೃಂದಾವನವ ನೋಡಿದೇ [ಪ]
ಸತ್ಯ ಪೂರ್ಣ ಕರಜರೆನಿಸಿ | ಸುತ್ತ ಕ್ಷೇತ್ರಗಳನೆಲ್ಲ
ಮತ್ತೆ ಬರಲು ಶ್ರೀರಂಗಕ್ಕೆ | ಛತ್ತೇಸಿಂಗ ಭೇಟಿಯಾದ (೧)
ಶತೃಗಳ ಗೆದ್ದು ಬಂದು | ಸತ್ಯಪ್ರಿಯಗೆರಗಿ ಅವನೂ
ಇತ್ತು ಊರುಗಳನೆರಡು | ನೆತ್ತಿ ಚಾಚಿ ನಮಿಸೀದ (೨)
ಮಾನಮಧುರಿ ಊರಿನಲ್ಲಿ | ಪ್ರಾಣೋತ್ಕ್ರಮಣ ಸಮಯದಲ್ಲಿ
ಜ್ಞಾನಿ ರಾಮಾಚಾರ್ಯರಿಗೆ | ದಾನ ಮಾಡ್ದ ತುರ್ಯಾಶ್ರಮ (೩)
ಮಾಧವನ ದಯದಿಂದೆ | ಸಾಧಿಸುತ ಬದರಿ ಯಾತ್ರೆ
ವೇದವತಿ ತೀರದಲ್ಲಿ | ಸಾಧುಗಳ ವೃಂದಾವನ (೪)
ವೇದ ವೇದ್ಯನಾದ ಗುರು | ಗುರುಗೋವಿಂದ ವಿಠ್ಠಲನ್ನ
ಮೋದದಿಂದ ಭಜಿಸುತ್ತ | ಆದರದಿ ಧ್ಯಾನಾಸಕ್ತ (೫)
vRuMdAvana nODide | satya prIyara
vRuMdAvanava nODidE [pa]
satya pUrNa karajarenisi | sutta kShEtragaLanella
matte baralu SrIraMgakke | ChattEsiMga BETiyAda (1)
SatRugaLa geddu baMdu | satyapriyageragi avanU
ittu UrugaLaneraDu | netti cAci namisIda (2)
mAnamadhuri Urinalli | prANOtkramaNa samayadalli
j~jAni rAmAcAryarige | dAna mADda turyASrama (3)
mAdhavana dayadiMde | sAdhisuta badari yAtre
vEdavati tIradalli | sAdhugaLa vRuMdAvana (4)
vEda vEdyanAda guru | gurugOviMda viThThalanna
mOdadiMda Bajisutta | Adaradi dhyAnAsakta (5)
Leave a Reply