Kayabekenna lakumi

Composer : Shri Amba bai

By Smt.Shubhalakshmi Rao

ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ
ಕಾಯಬೇಕೆನ್ನ ಲಕುಮಿ || ಪ ||

ಕಾಯಬೇಕೆನ್ನ ನೋಯುವೆ ಭವದಲಿ
ಕಾಯಜಪಿತನನು ಕಾಯದಿ ತೋರಿ || ಅ.ಪ ||

ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ |
ಪಾರುಗಾಣಿಸೆ ಜನನಿಯೆ ||
ತೋರೆ ನಿನ್ನ ಪತಿಯ ಪಾದವ ಮನದೊಳು |
ಸೇರಿಸೆ ಸುಜನರ ಸಂಗದೊಳೀಗ || ೧ ||

ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ |
ಮುಕ್ತಿಮಾರ್ಗವ ನೀನೀಯೆ ||
ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ |
ಮುಕ್ತರೊಡೆಯನೊಳು ಭಕ್ತಿಯ ನೀಡೆ || ೨ ||

ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ |
ಅಷ್ಟ ಐಶ್ವರ್ಯದಾಯಿನಿಯೆ ||
ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು |
ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ || ೩ ||


kAyabEkenna lakumi | kamalAyatAkShi
kAyabEkenna lakumi || pa ||

kAyabEkenna nOyuve Bavadali
kAyajapitananu kAyadi tOri || a.pa ||

kShIravAridhi tanaye | SrI hariya jAye |
pArugANise jananiye ||
tOre ninna patiya pAdava manadoLu |
sErise sujanara saMgadoLIga || 1 ||

muktidAyaki siriye | nI enna kAye |
muktimArgava nInIye ||
SaktirUpe ninna Baktili Bajisuve |
muktaroDeyanoLu Baktiya nIDe || 2 ||

aShTaBujada Saktiye | SrI BUmi durge |
aShTa aiSvaryadAyiniye ||
SrEShTha SrIgOpAlakRuShNaviThThalanoLu |
paTTavALve jagasRuShTi praLayadi || 3 ||

Leave a Reply

Your email address will not be published. Required fields are marked *

You might also like

error: Content is protected !!