Shri Kavindrara paada

Composer : Shri Lakumeesha [Kurudi Raghavendracharyaru]

By Smt.Shubhalakshmi Rao

Shri Kavindra Tirtharu :
ವೀಂದ್ರಾರೂಡಪದಾಸಕ್ತಂ ರಾಜೇಂದ್ರಮುನಿಸೇವಿತಮ್ |
ಶ್ರೀಕವೀಂದ್ರಮುನಿಂ ವಂದೇ ಭಜತಾಂ ಚಂದ್ರಸನ್ನಿಭಮ್ ||
वीन्द्रारूढपदासक्तं राजेन्द्रमुनिसेवितम्।
श्रीकवीन्द्रमुनिं वन्दे भजतां चन्द्रसन्निभम्॥
Aradhane: Chaitra Shukla Navami
Vrundavana : NAVA VRUNDAVANA (ANEGONDI)
Ashrama Gurugalu : Sri Vidyadhiraja Tirtharu
Ashrama Shishyaru : Sri Vaageesha Tirtharu


ಶ್ರೀ ಕವೀಂದ್ರರ ಪಾದ | ಶ್ರೀ ಕಮಲಕಭಿನಮಿಪೆ |
ಶ್ರೀಕರನ ಸ್ತುತಿ ಯೆನಗೆ | ವಾಕು ಕರುಣಿಸಲಿ |ಪ|

ಕಾಕು ಜನ ಸಂಗದಲಿ | ನೂಕಿದೆನು ಬಹು ಜನ್ಮ |
ಶ್ರೀ ಕಮಲನಾಭನಲಿ | ಜ್ಞಾನ ಕರುಣಿಸಲೆಂದು |ಅ. ಪ|

ವಿದ್ಯಾಧಿರಾಜರ ಸದ್ಮನವ ತಾ ಒಲಿಸೆ |
ಪದ್ಮಾಸನಾರ್ಚಿತ ರಾಮಾನಾಜ್ಞೆಯಲಿ |
ಶುದ್ಧ ಮಧ್ವರ ದಿವ್ಯ | ಗದ್ದುಗೆಯ ತಾವ್ನೀಡೆ |
ಮುದ್ದುವೀಂದ್ರ ಧ್ವಜನ | ಹೃದ್ಯದಲಿ ಧ್ಯಾನಿಸಿದ |೧|

ಬಲ್ಲ ಮಧ್ವರ ಶಾಸ್ತ್ರ | ಮಲ್ಲರಿವರೆನಿಸುತಲಿ |
ಖುಲ್ಲ ದುರ್ವಾದಿಗಳ | ಅಲ್ಲಲ್ಲಿ ಜಯಿಸುತಲಿ ||
ಉಲ್ಲಾಸದಲಿ ಮೂಲ | ಬಿಲ್ಧಾರಿ ರಾಮನನು |
ಎಲ್ಲ ಕಾಲದಿ ಸ್ತುತಿಸಿ |ಚೆಲ್ವ ಜಗದೀ ಮೆರೆದಾ |೨|

ದುಡುಕಿ ನಾನು ಭವದ | ಕಡಲೊಳಗೆ ನಾ ಬಿದ್ದು |
ದೃಢ ಭಕುತಿ ಜ್ಞಾನಾದಿ | ಪಡಿಲಿಲ್ಲ ಹರಿಯಲ್ಲಿ ||
ಸಡಗರ ಮುನಿಶಾಸ್ತ್ರ | ಸಡಗರದಿ ನೀ ತಿಳಿಸೋ |
ನಡುಗಡ್ಡೆ ತುಂಗೆಯಲಿರುವ ಲಕುಮೀಶ ದಾಸರಾದ |೩|


SrI kavIMdrara pAda | SrI kamalakaBinamipe |
SrIkarana stuti yenage | vAku karuNisali |pa|

kAku jana saMgadali | nUkidenu bahu janma |
SrI kamalanABanali | j~jAna karuNisaleMdu |a. pa|

vidyAdhirAjara sadmanava tA olise |
padmAsanArcita rAmAnAj~jeyali |
Suddha madhvara divya | gaddugeya tAvnIDe |
mudduvIMdra dhvajana | hRudyadali dhyAnisida |1|

balla madhvara SAstra | mallarivarenisutali |
Kulla durvAdigaLa | allalli jayisutali ||
ullAsadali mUla | bildhAri rAmananu |
ella kAladi stutisi |celva jagadI meredA |2|

duDuki nAnu Bavada | kaDaloLage nA biddu |
dRuDha Bakuti j~jAnAdi | paDililla hariyalli ||
saDagara muniSAstra | saDagaradi nI tiLisO |
naDugaDDe tuMgeyaliruva lakumISa dAsarAda |3|

Leave a Reply

Your email address will not be published. Required fields are marked *

You might also like

error: Content is protected !!