Composer : Shri Gurugovinda dasaru
ಪರಶುರಾಮಗೆ ಪರಮ ಪ್ರೀತ್ಯಾಗಲೀ || ಪ||
ವರವೆನಿಪ ನರದೇಹದ್ ಹವಿಷನರ್ಪಿಸುವೆ ||ಅ.ಪ.||
ಜಪತಪಾನುಷ್ಠಾನ |
ಅಪರಿಮಿತ ಸದ್ಯಾತ್ರೆ ಉಪಕೃತಿಯು ಪರರಿಗೆ |
ಕಪಟ ವಿರಹಿತವೂ |
ವಿಪುಲದಲಿ ಗೈದು ಸೂ |
ಪಕ್ವ ವಾಗಿರುವಂಥ ಸುಪವಿತ್ರ ದೇಹವನೆ |
ಅರ್ಪಿಸುವೆ ಹರಿಯೇ ||೧||
ಯಜ್ಞ ಕೃದ್ಯಜ್ಞನೇ |
ಯಜ್ಞ ನಾಮಕ ದೇವ ಯಜ್ಞ ಸಾಧನ ನೀನೆ |
ಯಜ್ಞ ಭೋಕ್ತಾ
ಯಜ್ಞ ಕ್ರತು ನೀನಾಗಿ |
ಯಜ್ಞ ಫಲನೆಂದೆನಿಸಿ ಯಜ್ಞ ಗೈಸಿದ ಕರ್ಮ |
ಪ್ರಾಜ್ಞ ನಿನ್ನದೈಯ್ಯಾ ||೨||
ಶಂಕೆ ಇಲ್ಲದೆ ಭಜಿಸೆ |
ಭಾರತೀಶನ ಪ್ರಿಯನ ಅಂಕಿತವ ಗೊಂಡು ನಿ |
ಷ್ಪಂಕವೆನಿಸಿದ ದೇಹ |
ಪಂಕಜ ಭವ ವಂದ್ಯ |
ಪರುಶು ರಾಮಾಭಿನ್ನ ಪಂಕಜಾಕ್ಷ ಗುರು |
ಗೋವಿಂದ ವಿಠ್ಠಲ ಕೊಳ್ಳೋ ||೩||
paraSurAmage parama prItyAgalI || pa||
varavenipa naradEhad haviShanarpisuve ||a.pa.||
japatapAnuShThAna |
aparimita sadyAtre upakRutiyu pararige |
kapaTa virahitavU |
vipuladali gaidu sU |
pakva vAgiruvaMtha supavitra dEhavane |
arpisuve hariyE ||1||
yaj~ja kRudyaj~janE |
yaj~ja nAmaka dEva yaj~ja sAdhana nIne |
yaj~ja bhOktA
yaj~ja kratu nInAgi |
yaj~ja phalaneMdenisi yaj~ja gaisida karma |
prAj~ja ninnadaiyyA ||2||
SaMke illade bhajise |
bhAratISana priyana aMkitava goMDu ni |
ShpaMkavenisida dEha |
paMkaja bhava vaMdya |
paruSu rAmAbhinna paMkajAkSha guru |
gOviMda viThThala koLLO ||3||
Leave a Reply