Composer : Shri Harapanahalli Bheemavva
ಗಜಮುಖ ಗಣಪತಿಗೆ ನಮೋ ನಮೋ
ತ್ರಿಜಗದೊಳ್ ಪೂಜಿಪಗೆ ನಮೋ ನಮೋ, ಗಣಪತಿಗೆ ನಮೋ ||
ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕ
ಸಿದ್ಧಿ ವಿನಾಯಕಗೆ ನಮೋ ನಮೋ
ವಿದ್ಯಾ ಪ್ರದಾಯಕಗೆ ನಮೋ ನಮೋ
ಲಡ್ಡಿಗೆ ಮೋದಕ ನೈವೇದ್ಯ ನಿನಗೆ
ಲಡ್ಡಿಗೆ ಮೋದಕವ ನಮೋ ನಮೋ
ನೈವೇದ್ಯಕರ್ಪಿಸುವೆ ನಮೋ ನಮೋ, ಗಣಪತಿಗೆ ನಮೋ ||೧||
ಹರನ ಕುಮಾರನೆ ಗಿರಿಜೆಯ ವರಪುತ್ರ
ಹರನ ಕುಮಾರಗೆ ನಮೋ ನಮೋ
ಗಿರಿಜೆಯ ವರಪುತ್ರಗೆ ನಮೋ ನಮೋ
ಹರಿಕಥೆಗಳ ಪೇಳ್ವೆ ವರಮತಿ ಪಾಲಿಸು
ಹರಿಕಥೆಗಳ ಪೇಳ್ವೆನೊ ನಮೋ ನಮೋ
ವರಮತಿ ಪಾಲಿಸೊ ನಮೋ ನಮೋ, ಗಣಪತಿಗೆ ನಮೋ ||೨||
ಆಕಾಶಕ್-ಅಭಿಮಾನಿ ಮೂಷಕ ವಾಹನ
ಆಕಾಶಕ್-ಅಭಿಮಾನಿಗೆ ನಮೋ ನಮೋ
ಮೂಷಕ ವಾಹನಗೆ ನಮೋ ನಮೋ
ಭೀಮೇಶ ಕೃಷ್ಣ ಕಥೆ ಸಂತೋಷದಿ ಪೇಳ್ವೆ
ಭೀಮೇಶ ಕೃಷ್ಣ ಕಥೆ ನಮೋ ನಮೋ
ಸಂತೋಷದಿ ಪೇಳ್ವೆನೊ ನಮೋ ನಮೋ, ಗಣಪತಿಗೆ ನಮೋ ||೩||
gajamukha gaNapatige namO namO
trijagadoL pUjipage namO namO, gaNapatige namO ||
siddhi vinAyaka vidyA pradAyaka
siddhi vinAyakage namO namO
vidyA pradAyakage namO namO
laDDige mOdaka naivEdya ninage
laDDige mOdakava namO namO
naivEdyakarpisuve namO namO, gaNapatige namO ||1||
harana kumArane girijeya varaputra
harana kumArage namO namO
girijeya varaputrage namO namO
harikathegaLa pELve varamati pAlisu
harikathegaLa pELveno namO namO
varamati pAliso namO namO, gaNapatige namO ||2||
AkAshak-abhimAni mooShaka vAhana
AkAshak-abhimAnige namO namO
mooShaka vAhanage namO namO
bheemEsha kRuShNa kathe saMtOShadi pELve
bheemEsha kRuShNa kathe namO namO
saMtOShadi pELveno namO namO, gaNapatige namO ||3||
Leave a Reply