Composer : Shri Vadirajaru
ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ [ಪ]
ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ-
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ /ಅ.ಪ/
ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ ರಾಮರ ಬಂಟ ಹನುಮಂತನೆ / ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿ
ಮರವನೇರಿ ಕುಳಿತಾತನೆ /೧/
ಅಶೋಕ ವನದಲ್ಲಿ ಸೀತೆಯನು ನೋಡಿದ
ಶ್ರೀರಾಮರ ಬಂಟ ಹನುಮಂತನೆ /
ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ
ತಿಳಿಸಿದ ರಘುವೀರ ದೂತ ಜಾಣನಿವನೆ /೨/
ಆತನ ಮಾತಿಗೆ ಸೇತುವೆನೆ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತನೆ
ಸೀತಾ ದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ /೩/
muddu rAmara baMTa
buddhiyuLLa hanumaMta
haddAgi hAridane AkASake [pa]
nidre gaiva samayadi eddu bAreMdare a-
llidda rakkasaranellA gelidAtane /a.pa/
dAri dUraveMdu dAriyane nirmisida
dhIra rAmara baMTa hanumaMtane / nODi-
bAreMdare pOgi laMkeya suTTu bEgadali
maravanEri kuLitAtane /1/
ashOka vanadalli sIteyanu nODida
shrIrAmara baMTa hanumaMtane /
mAteyanu mAtADisi kShEma suddi
tiLisida raghuveera dUta jANanivane /2/
Atana mAtige sEtuvene kaTTisida
sItArAmara baMTa hanumaMtane
sItA dEvi ammanige prItiya baMTanAda
muKyaprANa hayavadanana dUtane /3/
Leave a Reply