Composer : Shri Harapanahalli Bheemavva
ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ||
ವಾಲೆ ಕಟ್ಠಣಿ ಚಿಂತಾಕು ಮ್ಯಾಲೆ
ಸರಿಗೆ ಸರ ಮುತ್ತುಗಳು
ಕಾಲ ಗೆಜ್ಜೆ ಸರಪಳಿನಿಟ್ಟ
ಫಾಲಾಕ್ಷನ ಮಡದಿಗೆ ||೧||
ರಂಗುಮಾಣಿಕ್ಯದ ಹರಳು
ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ
ಮಂಗಳಾ ದೇವಿಯರಿಗೆ ||೨||
ದುಂಡು ಮುತ್ತಿನ ಮುಕುರ್ಯವು
ಚಂದ್ರ ಬಾಳ್ಯ ಬುಗುಡಿನಿಟ್ಟು
ದುಂಡು ಹರಡಿ ಕಂಕಣ ಕಮಲ
ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||೩||
ಜಾತಿಮಾಣಿಕ್ಯದ ವಂಕಿ
ನೂತನಾದ ನಾಗಮುರಿಗೆ
ಪ್ರೀತಿಯಲಿ ಪೀತಾಂಬ್ರನುಟ್ಟ
ಜ್ಯೋತಿಯಂತೆ ಹೊಳೆವೊ ಗೌರಿಗೆ ||೪||
ನೀಲವರ್ಣ ಭೀಮೇಶ ಕೃಷ್ಣನ
ಧ್ಯಾನ ಮಾಡುತಲಿ
ನೀಲಕಂಠನ ಸಹಿತ ಕುಳಿತ
ವಿಶಾಲ ನೇತ್ರೆ ಪಾರ್ವತಿಗೆ ||೫||
Arutiya beLaga bannire pArvati dEviyarige
kIruti koMDADutali parvata rAjana magaLige ||pa||
vAle kaTThaNi ciMtAku myAle
sarige sara muttugaLu
kAla gejje sarapaLiniTTa
PAlAkShana maDadige ||1||
raMgumANikyada haraLu
baMgAradABaraNaviTTu
duMDumallige muDidu kuLita
maMgaLA dEviyarige ||2||
duMDu muttina mukuryavu
caMdra bALya buguDiniTTu
duMDu haraDi kaMkaNa kamala
dvAryaniTTa vArijAkShige ||3||
jAtimANikyada vaMki
nUtanAda nAgamurige
prItiyali pItAMbranuTTa
jyOtiyaMte hoLevo gaurige ||4||
nIlavarNa bhImESa kRuShNana
dhyAna mADutali
nIlakaMThana sahita kuLita
viSAla nEtre pArvatige ||5||
Leave a Reply