Pahi parvati ninna

Composer : Shri Indiresha ankita

By Smt.Shubhalakshmi Rao

ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆ
ಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ]

ಶಿವನ ರಾಣಿ ಎನ್ನ ಭುವನ ಮಧ್ಯದಲಿ
ಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧)

ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆ
ಹರಿಯ ಬೋಧವ ಕೇಳಿ ಹಟವಗೆಲಿದೆಯೆ (೨)

ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನು
ಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ (೩)

ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸು
ಮರವು ಕೊಡದೆಲೆ ಹರಿಚರಣ ತೋರಿಸು (೪)

ಬಂದ ಭಕ್ತರ ಬಿಡುವುದಿಂದುಚಿತವೆ
ಇಂದಿರೇಶನ ಮನದಿ ತಂದು ತೋರಿಸೆ (೫)


pAhi pArvati ninna pAdava poMdihe
prEmadiMdali hariya pUje mADise [pa]

Sivana rANi enna Buvana madhyadali
pavana SAstravu nitya SravaNa mADise (1)

harana toDeyoLu poLeva sarasijAkShiye
hariya bOdhava kELi haTavagelideye (2)

sarvamaMgaLe ninna SaraNu baMdihe nAnu
hariya guNagaLa vANiyallirisu karuNadali (3)

hariya SAstrada smaraNe manadi nillisu
maravu koDadele haricaraNa tOrisu (4)

baMda Baktara biDuvudiMducitave
iMdirESana manadi taMdu tOrise (5)

Leave a Reply

Your email address will not be published. Required fields are marked *

You might also like

error: Content is protected !!